
Video – ಸ್ವ ಕ್ಷೇತ್ರದಲ್ಲೇ ಹೆಬ್ಬಾಳ್ಕರ್ ಗೆ ಮುಖಭಂಗ : ಸ್ವಾಭಿಮಾನಿ ಮತದಾರರಿಂದ ಮೋದಿ ಮಂತ್ರ

ಬೆಳಗಾವಿ : ಕಳೆದ ಕೆಲವು ದಿನಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೀಡುತ್ತಿರುವ ಉಡುಗೊರೆ ಸಧ್ಯ ಸಾರ್ವಜನಿಕರಿಂದಲೇ ವಿರೋಧ ವ್ಯಕ್ತವಾಗಿದೆ. ತಾಲೂಕಿನ ಹೊನ್ನಿಹಳ್ಳಿ ಗ್ರಾದಲ್ಲಿ ಶಾಸಕಿ ಹೆಬ್ಬಾಳ್ಕರ್ ರನ್ನು ತಡೆದು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಆಗಿನಿಂದಲೇ ಭರ್ಜರಿ ತಯಾರಿ ನಡೆಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಮತದಾರರನ್ನು ಸೆಳೆಯಲು ನಾನಾ ಬಗೆಯ ಕಸರತ್ತು ಮುಂದುವರಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ನೀಡುವಂತೆ ತೆಂಗಿನಕಾಯಿ ಮೇಲೆ ಪ್ರಮಾಣ ಮಾಡಿಸಿಕೊಂಡು ದಿನಬಳಕೆ ವಸ್ತು ಹಂಚಲಾಗುತ್ತಿದೆ. ಆದರೆ ಇದಕ್ಕೆ ಸಾರ್ವಜನಿಕರಿಂದಲೇ ವಿರೋಧ ವ್ಯಕ್ತವಾಗಿದೆ.
ಬುಧವಾರ ತಾಲೂಕಿನ ಹೊನ್ನಿಹಳ್ಳಿ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿ ಮಿಕ್ಸರ್ ಹಂಚುವ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಸೇರಿದಂತೆ ಗ್ರಾಮಸ್ಥರು ಹೆಬ್ಬಾಳ್ಕರ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಈವರೆಗೂ ಅಭಿವೃದ್ಧಿ ಕುರಿತು ಯಾವುದೇ ಕೆಲಸ ಮಾಡದರೆ ಸಧ್ಯ ಚುನಾವಣೆ ಹಿನ್ನಲೆ ಜನರಿಗೆ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ನಾವು ಬಡವರು ಇರಬಹುದು ಆದರೆ ನಮಗೆ ಸ್ವಾಭಿಮಾನವಿದೆ. ಹಸಿದ ಹೊಟ್ಟೆಯಲ್ಲಿ ಬದುಕು ಸಾಗಿಸುತ್ತೇವೆ ಹೊರತು ನಿಮ್ಮ ಮುಂದೆ ಕೈಚಾಚಲ್ಲ. ಈವರೆಗೂ ಗ್ರಾಮದ ಅಭಿವೃದ್ಧಿ ಮಾಡದೆ ಈಗ ಚುನಾವಣೆ ಹಿನ್ನಲೆ ಅತದಾರರನ್ನು ಕೊಂಡುಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತಗೆದುಕೊಂಡರು. ಜೊತೆಗೆ ಶಾಸಕರ ಮುಂದೆ ತೆಂಗಿನಕಾಯಿ ಒಡೆದು ಆಕ್ರೋಶ ಹೊರಹಾಕಿದರು.