ಗೋಕಾಕ್ : ಮುತ್ತು ಕೊಟ್ಟವನ “ಪಿಂಡ” ಬಿಟ್ಟವರು ಯಾರು….?
ಬೆಳಗಾವಿ : ಗೋಕಾಕನಲ್ಲಿ ಕಳೆದ ವರ್ಷ ಮಂಜು ಮುರಕಿಬಾಂವಿ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದಾರೆ. ಸಿದ್ಧಪ್ಪ ಬಬಲಿ ಜಾಮೀನು ಮೇಲೆ ಬಿಡುಗಡೆಯಾಗಿದ್ದು ಅವನಿಂದ ನಮ್ಮ ಕುಟುಂಬಕ್ಕೆ ಜೀವ ಬೇದರಿಕೆ ಇದೆ. ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ಸಹೋದರ ವಿಠ್ಠಲ ಮುರಕಿಬಾಂವಿ ತಿಳಿಸಿದರು.
ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದಪ್ಪ ಬಬಲಿ ಮಗಳು ಹಾಗೂ ನನ್ನ ಸಹೋದರ ಪರಸ್ಪರ ಪ್ರೀತಿಸುತ್ತಿದ್ದರು. ಮಂಜುಗೆ ನಿಮ್ಮ ಮಗಳು ಕೊಡುವಂತೆ ಅವರ ಮನೆಗೆ ಹೋಗಿ ಕೇಳಿದಾಗ ಆಗುವುದಿಲ್ಲ ಎಂದು ಹೇಳಿದ್ದರು. ಇಷ್ಟಾಗಿಯೂ ನನ್ನ ಸಹೋದರ ಅವರ ಮಗಳ ತಂಟೆಗೆ ಹೋಗಿದ್ದಿಲ್ಲ. ವಿನಾಕಾರ ಸಿದ್ಧಪ್ಪನ ಮಗಳ ಮದುವೆಯಾಗಿ ಮೂರು ವರ್ಷಕ್ಕೆ ನನ್ನ ಸಹೋದರನ ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ್ದಾರೆ. ಅಲ್ಲದೆ ನಿರಪರಾಧಿ ಎನ್ನುವ ಮುಖವಾಡ ಸಮಾಜಕ್ಕೆ ತೋರಿಸುತ್ತಿದ್ದಾರೆ. ಸಿದ್ಧಪ್ಪ ಬಬಲಿ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು ನಮ್ಮ ಮನೆಗೆ ಬಂದು ಪ್ರಕರಣ ಹಿಂಪಡೆಯುವಂತೆ ಒತ್ತಡ ಹಾಕುತ್ತಿದ್ದಾನೆ. ಇಲ್ಲದಿದ್ದರೇ ನೋಡಿಕೊಳ್ಳುವುದಾಗಿ ಬೇದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ನಮಗೆ ಮುಖ್ಯಮಂತ್ರಿ, ಐಜಿಪಿ, ಎಸ್ಪಿ, ಡಿಐಜಿ ಗೊತ್ತು. ಈ ಪ್ರಕರಣದಿಂದ ಹೊರ ಬರುತ್ತೇವೆ ಎನ್ನುವ ಬೇದರಿಕೆ ಹಾಕುತ್ತಿದ್ದಾರೆ. ಕೊಲೆಯಾದ ಮಂಜು ಸಿದ್ದಪ್ಪ ಬಬಲಿಯ ಮಗಳನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಕೊಲೆ ಮಾಡಿದ್ದಾರೆ. ಇಬ್ಬರು ಸಲುಗೆ ಇಂದ ಇರುವ ಫೋಟೋ ಬಿಡುಗಡೆ ಮಾಡಿದರು.
ಮಂಜು ಸಹೋದರಿ ಸಿದ್ಧವ್ವ ಕುರಿ ಮಾತನಾಡಿ, ನನ್ನ ಸಹೋದರ ಮಂಜು ಹಾಗೂ ಸಿದ್ಧಪ್ಪನ ಮಗಳು ಚಿಕ್ಕ ವಯಸ್ಸಿನಿಂದಲೂ ಪ್ರೀತಿಸುತ್ತಿದ್ದರು. ಮಗಳ ಮದುವೆ ಬೇರೆ ಕಡೆ ಮಾಡಿಕೊಟ್ಟು ಮೂರು ವರ್ಷದ ಬಳಿಕ ನನ್ನ ಸಹೋದರನನ್ನು ಕೊಲೆ ಮಾಡಿದ್ದಾರೆ. ಧಾರವಾಡ ಹೈಕೋರ್ಟ್ ನಲ್ಲಿ ಜಾಮೀನು ಪಡೆದುಕೊಂಡು ಬಂದಿರುವ ಸಿದ್ಧಪ್ಪ ಬಬಲಿ ಕೊಲೆ ಪ್ರಕರಣ ಹಿಂಪಡೆಯದಿದ್ದರೇ ನಿಮ್ಮ ಹುಡುಗನನ್ನು ಮುಗಿಸಿದಂತೆ ನಿಮ್ಮನ್ನು ಮುಗಿಸುವುದಾಗಿ ಜೀವ ಬೇದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿದರು.
ಗೋಕಾಕ ಪೊಲೀಸರು ಸರಿಯಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಸಿದ್ದಪ್ಪ ಬಬಲಿ ಕುಟುಂಬಸ್ಥರು ಪೊಲೀಸರ ಮೇಲೆ ಮಾಡುತ್ತಿರುವ 15 ಲಕ್ಷದ ವ್ಯವಹಾರದ ಬಗ್ಗೆ ನಮಗೆ ಗೊತ್ತಿಲ್ಲ. ನನ್ನ ಸಹೋದರನ್ನು ಕೊಲೆ ಮಾಡಿರುವ ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ರೇಖಾ ಮುರಕಿಭಾವಿ, ಶಂಕರ ಮುರಕಿಬಾಂವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.