ಅಥಣಿ : ಹೆಂಡಿತಿ ತವರು ಮನೆಯಿಂದ ಬರದಿದ್ದಕ್ಕೆ ಗುಂಡು ಹಾರಿಸಿದ ಪತಿರಾಯ
ಅಥಣಿ : ತವರು ಮನೆಯಿಂದ ಗಂಡನ ಮನೆಗೆ ಬರಲು ಒಪ್ಪದ ಹೆಂಡತಿಗೆ ಗುಂಡು ಹೊಡೆಯುವುದಾಗಿ ಹೆಸರಿಸಿದ ವಿಕೃತ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ.
ವಿಜಯಪುರದ ಸಿಂದಗಿ ಶಿವಾನಂದ ಸರಿಯಾಗಿ ಸಂಸಾರ ಮಾಡದ ಹಿನ್ನಲೆ ಹೆಂಡತಿ ಅಥಣಿಯ ತನ್ನ ತವರುಮನೆ ಸೇರಿದ್ದಾಳೆ. ಅವಳನ್ನು ಕರೆತರಲು ಬಂದ ಶಿವಾನಂದ ರಿವಾಲ್ವಾರ್ ನಿಂದ ಗುಂಡು ಹಾರಿಸುವುದಾಗಿ ಅವಾಜ್ ಹಾಕಿದ್ದಾನೆ. ಅಷ್ಟೇ ಅಲ್ಲದೆ ಗಾಳಿಯಲ್ಲಿ ನಾಲ್ಕು ಗುಂಡು ಹಾರಿಸಿ ಇನ್ನುಳಿದ ಗುಂಡನ್ನು ನಿನಗೆ ಹಾರಿಸುವುದಾಗಿ ದಮ್ಕಿ ಹಾಕಿದ್ದಾನೆ.
ನಿನ್ನೆ ಸೋಮವಾರ ಹೆಂಡತಿ ತವರುಮನೆ ಅಥಣಿಗೆ ಬಂದ ಶಿವಾನಂದ ಹೆಂಡತಿಗೆ ಹೆದರಿಸಿದ್ದಾನೆ. ನನ್ನ ಜೊತೆ ಬರದಿದ್ದರೆ ನಿನಗೆ ಗುಂಡು ಹೊಡೆದು ಸಾಯಿಸುವುದಾಗಿ ಹೆದರಿಸಿದ್ದಾನೆ.
ಶಿವಾನಂದನ ಈ ಕೃತಕ್ಯೆ ಹೆಂಡತಿ ತವರುಮನೆಯವರು ಸಮಾಧಾನಪಡಿಸಿ ಕಳುಹಿಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಗೆ ಎಸ್ಪಿ ಆದೇಶಿಸಿದ್ದಾರೆ. ಶಿವಾನಂದನ್ನು ವಶಕ್ಕೆ ಪಡೆಯಲಾಗಿದೆ.