Select Page

ಜನರ ಕಣ್ಣೀರು ಒರೆಸದ ಗಜಾನನ ಜನನಾಯಕನಾಗಲು ಹೇಗೆ ಸಾಧ್ಯ : ಅಥಣಿ ಕಾಂಗ್ರೆಸ್ ನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲವಾದ್ರಾ ಗಜಾನನ ಮಂಗಸೂಳಿ

ಜನರ ಕಣ್ಣೀರು ಒರೆಸದ ಗಜಾನನ ಜನನಾಯಕನಾಗಲು ಹೇಗೆ ಸಾಧ್ಯ : ಅಥಣಿ ಕಾಂಗ್ರೆಸ್ ನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲವಾದ್ರಾ ಗಜಾನನ ಮಂಗಸೂಳಿ

ತಾಲೂಕಿನ ಹಲವೆಡೆ ಉಂಟಾದ ಭೀಕರ ಪ್ರವಾಹಕ್ಕೆ ಮನೆ ಕಳೆದುಕೊಂಡು ಬೀದಿ ಪಾಲಾದ ಜನರಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಇನ್ನೂ ಅನೇಕ ಅಭಿವೃದ್ಧಿ ಪರ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇವುಗಳ ಕುರಿತು ಶಾಸಕ ಅಭ್ಯರ್ಥಿ ಧ್ವನಿ ಎತ್ತಿಲ್ಲ. ಇನ್ನೂ ತಾಲೂಕಿನಲ್ಲಿ ಕಳಪೆ ರಸ್ತೆ ಕಾಮಗಾರಿ ಕುರಿತು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದರು ವಿರೋಧ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ಮಾತ್ರ ಬಾಯಿಗೆ ಬೀಗ ಹಾಕಿಕೊಂಡಿದ್ದು ವಿಪರ್ಯಾಸ.

ಅಥಣಿ : ರಾಜ್ಯ ರಾಜಕಾರಣದ ಪ್ರಮುಖ ನಾಯಕರ ತವರು ಕ್ಷೇತ್ರವಾದ ಅಥಣಿ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನೆಲೆ ಕಂಡುಕೊಳ್ಳಲು ಇನ್ನಿಲ್ಲದ ಕಸರತ್ತು ಮುಂದುವರಿಸಿದೆ. ಇವೆಲ್ಲದರ ಮಧ್ಯೆ ಟಿಕೆಟ್ ಪಡೆಯಲು ಅನೇಕ ನಾಯಕರ ಕಸರತ್ತು ಮುಂದುವರಿದೆ. ಇಷ್ಟೇಲ್ಲಾ ಬೆಳವಣಿಗೆ ಮಧ್ಯೆ, ಜಾತಿ ಮೀರಿ ಜನ ಮತ ಸೆಳೆಯುವ ನಾಯಕ ಕಾಣದಿರುವುದು ವಿಪರ್ಯಾಸ.

ಇನ್ನೂ ಈಗಾಗಲೇ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕಿರುವುದಾಗಿ ಹೇಳುತ್ತಿರುವ ಮುಖಂಡ ಗಜಾನನ ಮಂಗಸೂಳಿ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಸಾಲು ಸಾಲು ಆರೋಪಗಳು ಇವರ ಮೇಲೆ ಕೇಳಿ ಬರುತ್ತಿವೆ. ತಾಲೂಕಿನ ಕಾಂಗ್ರೆಸ್ ಮುಖಂಡರನ್ನು ಗಮನಕ್ಕೆ ತಗೆದುಕೊಳ್ಳದೆ ಇರುವುದು ಅನೇಕ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದ್ದಂತು ಸುಳ್ಳಲ್ಲ. ಇನ್ನೂ ನಾಯಕತ್ವ ಬಲ ಪಡಿಸುವ ನಿಟ್ಟಿನಲ್ಲಿ ಯಾವುದೇ ಸಂಘಟನೆ ಕೈಗೊಳ್ಳದಿರುವುದು ಕೂಡಾ ಹಿರಿಯ ನಾಯಕರ ಕೋಪಕ್ಕೆ ಕಾರಣವಾಗಿದೆ.

ಕುಮಠಳ್ಳಿ ಸವದಿ ನಡೆಗೆ ಮುದುಡಿದ ಕೈ : ಶಾಸಕ ಮಹೇಶ್ ಕುಮಠಳ್ಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಅಥಣಿ ಕ್ಷೇತ್ರದ ಮೇಲಿನ ಹಿಡಿತದಿಂದ ಈವರೆಗೂ ಕೈ ನಾಯಕರಿಗೆ ಕಸಿದುಕೊಳ್ಳುವ ಶಕ್ತಿ ವೃದ್ದಿಸಿಲ್ಲ. ಇನ್ನೂ ಆಡಳಿತ ಪಕ್ಷದ ಶಾಸಕರ ವಿರುದ್ಧ ಕ್ಷೇತ್ರದ ಸಮಸ್ಯೆ ಕುರಿತು ಯಾವುದೇ ಧ್ವನಿ ಎತ್ತದ ಕೈ ಮುಖಂಡರ ನಡೆಗೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಅಸಮಾಧಾನ ಹೊಂದಿದ್ದು ಸ್ಪಷ್ಟವಾಗಿ ಗೋಚರಿಸುವುದರಲ್ಲಿ ಎರಡು ಮಾತಿಲ್ಲ.

ಕಾಂಗ್ರೆಸ್ ಮುಖಂಡ ಮಂಗಸೂಳಿ ಹೊಂದಾಣಿಕೆ ರಾಜಕಾರಣ : ಈವರೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಿಂಬಿಸಿಕೊಂಡ ಗಜಾನನ ಮಂಗಸೂಳಿ ಮಾತ್ರ ಯಾವುದೇ ರೀತಿಯಲ್ಲೂ ಪಕ್ಷ ಸಂಘಟನೆಗಾಗಿ ವಿಶೇಷ ಪ್ರಯತ್ನ ಮಾಡಿದವರಲ್ಲ. ಅಷ್ಟೇ ಅಲ್ಲದೆ ಜನರ ಸಮಸ್ಯೆ ಕುರಿತು ಈವರೆಗೂ ಶಾಸಕ ಕುಮಠಳ್ಳಿ ಹಾಗೂ ಪರಿಷತ್ ಸದಸ್ಯ ಸವದಿ ವಿರುದ್ಧ ವಾಗ್ದಾಳಿ ನಡೆಸುವ ತಾಕತ್ತು ಪ್ರದರ್ಶನ ಮಾಡಲಿಲ್ಲ. ಇವೆಲ್ಲವನ್ನೂ ಗಮನಿಸುತ್ತಿರುವ ಅಥಣಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ರೆಬಲ್ ನಾಯಕನ ಅವಶ್ಯಕತೆ ನಮಗೆ ಬೇಕೆಂಬ ಆಗ್ರಹ ಮಾಡುತ್ತಿರುವುದು ವಿಪರ್ಯಾಸ.

ಜನರ ಕಣ್ಣೀರು ಒರೆಸದ ಗಜಾನನ ಅಥಣಿ ವಿಘ್ನನಿವಾರಕ ಹೇಗೆ ಆಗುವರು : ಹೌದು ತಾಲೂಕಿನ ಹಲವೆಡೆ ಉಂಟಾದ ಭೀಕರ ಪ್ರವಾಹಕ್ಕೆ ಮನೆ ಕಳೆದುಕೊಂಡು ಬೀದಿ ಪಾಲಾದ ಜನರಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಇನ್ನೂ ಅನೇಕ ಅಭಿವೃದ್ಧಿ ಪರ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇವುಗಳ ಕುರಿತು ಶಾಸಕ ಅಭ್ಯರ್ಥಿ ಧ್ವನಿ ಎತ್ತಿಲ್ಲ. ಇನ್ನೂ ತಾಲೂಕಿನಲ್ಲಿ ಕಳಪೆ ರಸ್ತೆ ಕಾಮಗಾರಿ ಕುರಿತು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದರು ವಿರೋಧ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ಮಾತ್ರ ಬಾಯಿಗೆ ಬೀಗ ಹಾಕಿಕೊಂಡಿದ್ದು ವಿಪರ್ಯಾಸ. ಇಷ್ಟೇಲ್ಲ ಸಂಕಷ್ಟ ಅನುಭವಿಸಿ ಕ್ಷೇತ್ರದ ಜನ ಬದುಕುತ್ತಿದ್ದರು ಇವರ ಕಣ್ಣೀರು ಒರೆಸದ ಗಜಾನನ ಮಂಗಸೂಳಿ ಶಾಸಕರಾಗಿ ಏನು ಮಾಡಲು ಸಾಧ್ಯ ಎನ್ನುತ್ತಾರೆ ಕ್ಷೇತ್ರದ ಜನ.

Advertisement

Leave a reply

Your email address will not be published. Required fields are marked *

error: Content is protected !!