ಅಥಣಿ : ಹೆಸ್ಕಾಂ ಆವರಣದಲ್ಲಿ ನೌಕರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
ಸಹೋದ್ಯೋಗಿಯ ಸಾವಿಗೆ ಕಾರಣವಾದರಾ ಈ ಅಬ್ಬರು ಅಧಿಕಾರಿಗಳು : ಪ್ರಕರಣ ಮಣ್ಣು ಕೊಡಲು ಯತ್ನಿಸಿದ ಕೆಲವು ಕಾಣದ ಕೈಗಳು
ಅಥಣಿ : ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಹೆಸ್ಕಾಂ ನೌಕರ ಅಥಣಿ ವಿದ್ಯುತ್ ಇಲಾಖೆ ಕಚೇರಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಹಿಂದಿನ ರೋಚಕ ವಿಷಯಗಳು ಸಧ್ಯ ಹೊರಗೆ ಬರುತ್ತಿವೆ.
ಭಾನುವಾರ ತಡರಾತ್ರಿ ಮಂಜುನಾಥ ಗಂಗಪ್ಪ ಮುತ್ತಗಿ (29) ನೌಕರ ಅಥಣಿ ಹೆಸ್ಕಾಂ ಕಚೇರಿ ಆವರಣದಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ. ಇನ್ನೂ ಈ ಯುವಕ ಕಳೆದ ಕೆಲವು ದಿನಗಳಿಂದ ಮೇಲಿನ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬುದಕ್ಕೆ ಹಲವು ಅನುಮಾನಗಳು ಮೂಡುತ್ತಿರುವುದು ಸುಳ್ಳಲ್ಲ.
ಕಳೆದು ಕೆಲವು ದಿನಗಳಿಂದ ಹೆಸ್ಕಾಂ ನೌಕರ ಮಂಜುನಾಥ ಎಂಬುವವರಿಗೆ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಸ್ವತಃ ಯುವಕನೇ ಮಾಡಿದ್ದಾನೆ. ಇದಕ್ಕೆ ಪುಷ್ಟಿ ಎಂಬಂತೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ಸಾವಿಗೆ ನೇರವಾಗಿ ಇಬ್ಬರು ಅಧಿಕಾರಿಗಳು ಕಾರಣ ಎಂಬುದನ್ನು ಬರೆದುಕೊಂಡಿದ್ದು ಇದರಂತೆಯೇ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸ್ ಠಾಣೆ ಪ್ರಕರಣದಲ್ಲಿ ಏನಿದೆ : ಇನ್ನೂ ಹೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಫ್ ಐ ಆರ್ ನಲ್ಲಿ ಹಲವು ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.
ಮಂಜುನಾಥ ಪತ್ನಿ ಮಾಡಿರುವ ಆರೋಪ, ತನ್ನ ಗಂಡನ ಸಾವಿಗೆ ಹೆಸ್ಕಾಂ ಸಿಬ್ಬಂದಿಗಳಾದ ಅಥಣಿಯ ನಜೀರ್ ಡಾಲಾಯತ ಹಾಗೂ ರಾಯಬಾಗ ತಾಲೂಕಿನ ಇಟ್ನಾಳ್ ಗ್ರಾಮದ ಬಸವರಾಜ ಕುಂಬಾರ ಎಂಬುವವರು ನನ್ನ ಗಂಡನಿಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ. ಅವನ ಸಾವಿಗೆ ಇವರೇ ಕಾರಣ ಎಂದು ಹೇಳಿದ್ದಾಳೆ.
ಪ್ರಕರಣ ಮುಚ್ಚಿ ಹಾಕಲು ಯತ್ನ : ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಹೆಸ್ಕಾಂ ಸಿಬ್ಬಂದಿ ಇಬ್ಬರು ಅಧಿಕಾರಿಗಳ ಕಿರುಕುಳದ ಕುರಿತು ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ಮುಚ್ಚಿ ಹಾಕಲು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಧಿಕಾರಿಗಳನ್ನು ಉಳಸಿಕೊಳ್ಳಲು ಕೆಲವರು ಮೃತ ಸಿಬ್ಬಂದಿ ಮನೆಯವರಿಗೆ ಹಣದ ಆಮಿಷ ಇಡುತ್ತಿದ್ದಾರೆ ಎಂಬ ಆರೋಪವು ದಟ್ಟವಾಗಿದೆ.