
ನಡು ರಸ್ತೆಯಲ್ಲೇ ಜೆಡಿಎಸ್ ಮುಖಂಡನ ಭೀಕರ ಹತ್ಯೆ

ಚಿಕ್ಕಬಳ್ಳಾಪುರ : ನಡು ರಸ್ತೆಯಲ್ಲೇ ಜೆಡಿಎಸ್ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ತಮ್ಮನಾಯಕನಹಳ್ಳಿ ಗೇಟ್ ಬಳಿ ನಡೆದಿದೆ.
ಜೆಡಿಎಸ್ ಪಕ್ಷ ಮುಖಂಡ ವೆಂಕಟೇಶ್ ಮೃತ ವ್ಯಕ್ತಿ. ತಮ್ಮನಾಯಕನಹಳ್ಳಿ ಗೇಟ್ ನಿಂದ ತಮ್ಮ ಮನೆಯಾದ ತಮ್ಮನಾಯಕನಹಳ್ಳಿ ಊರಿಗೆ ಬೈಕ್ ಮೇಲೆ ತೆರಳುವ ಸಂದರ್ಭದಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿನೀಡಿ ಪರಿಶೀಲನೆ ಮಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.