Select Page

Video : ಅಥಣಿಯಲ್ಲಿ ಸೆರೆಸಿಕ್ಕ ಪುನುಗು ಬೆಕ್ಕು (ಸಿವೆಟ್ ಕ್ಯಾಟ್)

Video : ಅಥಣಿಯಲ್ಲಿ ಸೆರೆಸಿಕ್ಕ ಪುನುಗು ಬೆಕ್ಕು (ಸಿವೆಟ್ ಕ್ಯಾಟ್)

ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿನ ಕೃಷ್ಣಾ ಬಡಾವಣೆಯಲ್ಲಿ ನಿನ್ನೆ ರಾತ್ರಿ ಪುನುಗು ಬೆಕ್ಕು(ಸಿವೆಟ್ ಕ್ಯಾಟ್) ಸೆರೆಸಿಕ್ಕಿದೆ.

ಸ್ಥಳಿಯರು ಚಿರತೆ ಮರಿ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಂತೆ. ಸ್ಥಳಕ್ಕೆ ಅಥಣಿ ವಲಯ ಅರಣ್ಯಾಧಿಕಾರಿಗಳು ಬಂದು ಪರಿಶೀಲಿಸಿದಾಗ ಇದೊಂದು ಪುನುಗು ಬೆಕ್ಕು(ಸಿವೆಟ್ ಕ್ಯಾಟ್) ತಿಳಿಸುತ್ತಿದ್ದಂತೆ ಸ್ಥಳಿಯರು ನಿಟ್ಟುಸಿರು ಬಿಟ್ಟಿದ್ದಾರೆ.

ನಮ್ಮ ದೇಶದಲ್ಲಿ ಬಹಳ ವಿರಳವಾಗಿರುವ ಈ ಪುನುಗು ಬೆಕ್ಕು ಕಾಣಿಸುತ್ತದೆ, ನಿನ್ನೆ ರಾತ್ರಿ ಮಹಾದೇವ ಹೊನ್ನೊಳ್ಳಿ ಎಂಬುವ ರೈತರ ಹೊಲದಲ್ಲಿ ಹಿಡಿದು ಕೋಳಿಯ ಬೋನಿನಲ್ಲಿ ಇರಿಸಲಾಗಿದ್ದು. ವಿಷಯ ಗೊತ್ತಾಗುತ್ತಿದ್ದಂತೆ ವಲಯ ಅರಣ್ಯ ಅಧಿಕಾರಿಗಳು  ಸ್ಥಳಕ್ಕೆ ಬಂದು ಈ ಪ್ರಾಣಿಯನ್ನು ವಶಪಡಿಸಿಕೊಂಡು ಮತ್ತೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಒಟ್ಟಿನಲ್ಲಿ ಅಪರೂಪವಾಗಿರುವ ಈ ಬೆಕ್ಕನ್ನು ನೋಡಲು ಅಪಾರ ಜನ‌ಸೇರಿದ್ದು ಎಲ್ಲರನ್ನೂ ಒಂದು ಕ್ಷಣ ಚಕಿತಕ್ಕೆ ಕಾರಣವಾಗಿತ್ತು.

Advertisement

Leave a reply

Your email address will not be published. Required fields are marked *

error: Content is protected !!