
ಭೀಕರ ಅಪಘಾತ : ಸ್ಥಳದಲ್ಲೇ ಯುವಕ ಸಾವು

ಬೆಳಗಾವಿ : ತಾಲೂಕಿನ ದೇಸೂರು ಕ್ರಾಸ್ ಬಖಿ ಬೈಕ್ ಮತ್ತು ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಜೆ ನಡೆದಿದೆ.

ಗಜಪತಿ ಗ್ರಾಮದ ಅಕ್ಷಯ್ ಹಿರೇಮಠ ಮೃತ ದುರ್ದೈವಿ. ಮತ್ತೋರ್ವ ನಾಗಯ್ಯ ಹಿರೇಮಠ ಸ್ಥಿತಿ ಗಂಭೀರವಾಗಿದ್ದು. ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ