ಖಾನಾಪುರ : ಮಗಳನ್ನು ಪ್ರೀತಿಸಿದವನ ಕೊಲೆಗೆ ಸುಪಾರಿ ಕೊಟ್ಟ ತಂದೆ, ತಾಯಿ
ಖಾನಾಪುರ : ಜಿಲ್ಲೆಯ ಖಾನಾಪುರ ತಾಲೂಕಿನ ರೈಲ್ವೆ ಹಳಿ ಮೇಲೆ ಸಾವಣಪ್ಪಿದ್ದ ಯುವಕನ ಪ್ರಕರಣ ಸ್ಪೋಟಕ ತಿರುವು ಪಡೆದುದ್ದು, ಪ್ರೀತಿಸಿದ ಯುವತಿಯ ತಂದೆ ತಾಯಿಯೇ ಯುವಕನ ಕೊಲೆಗೆ ಸುಪಾರಿ ನೀಡಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಖಾನಾಪುರ ತಾಲೂಕಿನ ಅರ್ಬಾಜ್ ಹಾಗೂ ಶ್ವೇತಾ ಎಂಬ ಯುವತಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಪ್ರೀತಿಗೆ ಯುವತಿ ಮನೆಯಲ್ಲಿ ವಿರೋಧವಿತ್ತು. ಸೆಪ್ಟೆಂಬರ್ 28 ರಂದು ಬೆಳಗಾವಿಯಲ್ಲಿದ್ದ ಅರ್ಬಾಜ್ ನನ್ನು ಮಾತುಕತೆ ಮಾಡುವುದಾಗಿ ಖಾನಾಪುರಕ್ಕೆ ಕರೆಸಿದ ಆರೋಪಿಗಳು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ರುಂಡ, ಕೈ ಕಾಲು ಕಟ್ ಮಾಡಿ ಪ್ರಕರಣದ ದಿಕ್ಕು ತಪ್ಪಿಸಲು ಅರ್ಬಾಜ್ ಶವ ರೈಲು ಹಳಿ ಮೇಲೆ ಬಿಸಾಡಿದ್ದರು.
ಈ ಪ್ರಕರಣ ಮೊದಲು ರೈಲ್ವೆ ಪೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು, ಅಕ್ಟೋಬರ್4 ರಂದು ಖಾನಾಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾದ ನಂತರ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಯುವತಿ ತಂದೆ ಈರಪ್ಪ, ತಾಯಿ ಸುಶೀಲ್ ಇಬ್ಬರು ಸೇರಿ ಅರ್ಬಾಜ್ ಕೊಲೆಗೆ ಸಂಚು ರೂಪಿಸಿ ಪುಂಡಲೀಕ್ ಮಹಾರಾಜ್ ಎಂಬುವನಿಗೆ ಸುಪಾರಿ ಕೊಟ್ಟಿದ್ದು ತಿಳಿದುಬಂದಿದೆ.
ಈ ಪ್ರಕರಣ ಭೇಧಿಸಲು ಬೈಲಹೊಂಗಲ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಪುಂಡಲೀಕ ಮುತಗೇಕರ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ಬಳಿಕ ಕೊಲೆಯ ಸಂಚು ಬಯಲಾಗಿದೆ. ಶ್ವೇತಾ ತಂದೆ ಈರಪ್ಪ ಕುಂಬಾರ್, ಸುಶೀಲ್ ಕುಂಬಾರ್, ಗಣಪತಿ ಗೊಂದಳಿ, ಕುತುಬುದ್ದೀನ್ ಬೇಪಾರಿ, ಮಾರುತಿ ಗೊಂದಳಿ, ಪ್ರಶಾಂತ ಪಾಟೀಲ್, ಮಂಜು ಗೊಂದಳಿ, ಪ್ರವೀಣ್ ಪೂಜಾರಿ, ಶ್ರೀಧರ ಡೋಣಿ ಸಂಚು ರೂಪಿಸಿದ ಆರೋಪಿಗಳ್ನು ಪೊಲೀಸರು ಬಂಧಿಸಿದ್ದಾರೆ.
ಸೆ.28 ರಂದು ಖಾನಾಪುರ ರೈಲ್ವೆ ಹಳೆಯ ಮೇಲೆ ಮೃತದೇಹ ಸಿಕ್ಕಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ ಮೇಲೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಮೃತಪಟ್ಟ ಅಬರಬಾಜ್ ತಾಯಿ ನಜೀಮಾ ಮುಲ್ಲಾ ದೂರು ನೀಡಿದ ಮೇಲೆ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಿದ ಮೇಲೆ ಕಾರ್ಯಚರಣೆ ನಡೆಸಿ 10 ಜನ ಕೊಲೆಗೈದ ಆರೋಪಿಯನ್ನು ಬಂಧಿಸಲಾಗಿದೆ.
ಲಕ್ಷ್ಮಣ ನಿಂಬರಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆಳಗಾವಿ