
ಹುಟ್ಟು ಹಬ್ಬದ ಮರುದಿನ ಯುವಕನಿಗೆ ಚಟ್ಟ ಕಟ್ಟಿದ ದುಷ್ಕರ್ಮಿಗಳು

ಬೆಳಗಾವಿ : ಹುಟ್ಟು ಹಬ್ಬ ಆಚರಿಸಿದ ಮರುದಿನವೇ ಯುವಕನ ಬದುಕಿಗೆ ಕೊಳ್ಳಿ ಇಟ್ಟ ಘಟನೆ ನಗರದಲ್ಲಿ ನಡೆದಿದೆ.
ಸಮೀಪದ ಹತ್ತರಗಿ ಬಳಿ ಭಾನುವಾರ ರಾತ್ರಿ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ನಗರದ ಯಮಕನಮರಡಿ ನಿವಾಸಿ ವಿನಾಯಕ ಹೋರಕೇರ( 28 ) ಕೊಲೆಯಾದ ಯುವಕ.
ಕಳೆದ ಶನಿವಾರ ಈ ಯುವಕ ತನ್ನ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ, ಆದರೆ ಕ್ಷುಲ್ಲಕ ಕಾರಣಕ್ಕಾಗಿ ಯುವಕನನ್ನು ಕೊಲೆಗೈಯಲಾಗಿದೆ ಎಂಬುದು ವಿಪರ್ಯಾಸ.