ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸದಿದ್ದರೆ ಧರಣಿ ಸತ್ಯಾಗ್ರಹ : ಭೀಮಪ್ಪ ಗಡಾದ
ಬೆಳಗಾವಿ : ರಾಜ್ಯದ ಎಲ್ಲಾ ಸರಕಾರಿ ಮತ್ತು ಅರೇ ಸರಕಾರಿ ಕಚೇರಿಯ ಕಟ್ಟಡಗಳ ಮೇಲೆ ಕನ್ನಡ ನಾಡಧ್ವಜ ಹಾರಿಸಲು ಸರಕಾರದಿಂದ ಅಧಿಕೃತ ಆದೇಶ ಹೊರಡಿಸದಿದ್ದರೇ ಅ.26 ರಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸುವುದಾಗಿ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಧ್ಯಮದವರಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಎಲ್ಲ ಸರಕಾರಿ ಮತ್ತು ಅರೇ ಸರಕಾರಿ ಕಚೇರಿಯ ಕಟ್ಟಡದ ಮೇಲೆ ಈಗ ಹಾರಿಸಲಾಗುತ್ತಿರುವ ನಮ್ಮ ರಾಷ್ಟç ಧ್ವಜಕ್ಕೆ ಚ್ಯುತಿ ಬರದ ರೀತಿಯಲ್ಲಿ ನಮ್ಮ ಕನ್ನಡ ನಾಡಿನ ಹೆಮ್ಮೆಯ ಪ್ರತೀಕವಾದ ಕನ್ನಡ ನಾಡಧ್ವಜವನ್ನು ಹಾರಿಸುವುದು ಅವಶ್ಯವಿದೆ. ಈ ಕುರಿತು ಕಳೆದ 24 ನವೆಂಬರ್ 2014ರಿಂದ ಸರಕಾರಕ್ಕೆ ಸಾಕಷ್ಟು ಪತ್ರ ಬರದು ಹೋರಾಟಗಳನ್ನು ನಡೆಸುತ್ತಿದ್ದರೂ ಸರಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರ ಧ್ವಜಕ್ಕೆ ಚ್ಯುತಿ ಬರದ ರೀತಿಯಲ್ಲಿ ಕನ್ನಡ ನಾಡಧ್ವಜವನ್ನು ಹಾರಿಸಲು ಮತ್ತು ಆಯ್ದ ಯಾವುದೇ ಧ್ವಜಕ್ಕೆ ಕರ್ನಾಟಕ ರಾಜ್ಯದ ಧ್ವಜವೆಂದು ಕಾನೂನು ಸ್ವರೂಪ ನೀಡಲು ಕಾನೂನಿನಲ್ಲಿ ಯಾವುದೇ ತೊಂದರೆಗಳು ಇರುವುದಿಲ್ಲವೆಂದು ಅಡ್ವೋಕೇಟ್ ಜನರಲ್ ಕಳೆದ 8 ಅಕ್ಟೋಬರ್ 2015ರಂದು ಸರಕಾರಕ್ಕೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿದ್ದಾರೆ ಎಂದಿದ್ದಾರೆ..
ಸಾಕಷ್ಟು ಪತ್ರ ವ್ಯವಹಾರ ಹೋರಾಟಗಳ ನಂತರ ಕೊನೆಗೂ ಎಚ್ಚೆತ್ತುಕೊಂಡ ಸರಕಾರ ಈಗಿರುವ ನಾಡಧ್ವಜಕ್ಕೆ ಹೊಸ ವಿನ್ಯಾಸವನ್ನು ಸಿದ್ಧಪಡಿಸಿ ಅದಕ್ಕೆ ಕಾನೂನು ಸ್ವರೂಪ ನೀಡುವ ನಿಟ್ಟಿನ್ಲಿ 2017ರಂದು 9 ಜನ ಸರಕಾರಿ ಅಧಿಕಾರಿ ಹಾಗೂ ಸರಕಾರಿಯೇತರ ಸದಸ್ಯರುಗಳು ಸಮಿತಿ ರಚಿಸಿ ಸರಕಾರ ಆದೇಶ ಹೊರಡಿಸಿತ್ತು.
ಸಾಕಷ್ಟು ವಿಳಂಬದ ನಂತರ ಈ ಸಮಿತಿಯೂ ಹಲವಾರು ಬಾರಿ ಸಭೆ ಸೇರಿ ನಾಡಿನ ಹಿರಿಯ ಸಾಹಿತಿಗಳು, ಕನ್ನಡಪರ ಚಿಂತಕರು ಮತ್ತು ರಾಜ್ಯದ ಪ್ರಮುಖ ಕನ್ನಡ ಸಂಘಟನೆಗಳ ಮುಖಂಡರೊAದಿಗೆ ಚರ್ಚಿಸಿ ಈಗಿರುವ ನಾಡಧ್ವಜಕ್ಕೆ ಅಂತಿಮ ವಿನ್ಯಾಸ ಸಿದ್ಧಪಡಿಸಿ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಸಾಕಷ್ಟು ಪರ, ವಿರೋಧಗಳ ನಡುವೆ ಈ ಪ್ರಸ್ತಾವನೆಯನ್ನು ಮಂಜೂರಾತಿಗಾಗಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು ಎಂದು ಹೇಳಿದ್ದಾರೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಎದರು ಹಾರಾಡುತ್ತಿರುವ ಕನ್ನಡ ನಾಡಧ್ವಜ ತೆರವಿಗೆ ಕೋರಿ ಕೇಂದ್ರ ಗೃಹ ಇಲಾಖೆಗೆ ಈ ಮೊದಲು ಪತ್ರ ಬರೆದಿದ್ದ ನಾಡದ್ರೋಹಿ ಎಂಇಎಸ್ ಈಗ ಬೆಳಗಾವಿ ಮಹಾನಗರ ಪಾಲಿಕೆಯ ಕಟ್ಟಡದ ಮುಂಭಾಗದಲ್ಲಿ ಹಾರಿಸಲಾಗಿರುವ ನಾಡಧ್ವವನ್ನು ತೆರವುಗೊಳಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದರುವುದಲ್ಲದೆ, ಪ್ರತಿ ವರ್ಷ ರಾಜ್ಯೋತ್ಸವದ ದಿನವೇ ಎಂಇಎಸ್ ಕರಆಳ ದಿನಾಚಾರಣೆ ಮಾಡುವುದರ ಮೂಲಕ ಕಾನೂನಿನ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದರೂ ಮತರಾಜಕಾರಣಕ್ಕಾಗಿ ನಮ್ಮ ಜನಪ್ರತಿನಿಧಿಗಳು ಹಾಗೂ ಸರಕಾರ ಇವರ ಮೇಲೆ ಕ್ರಮ ಕೈಗೊಳ್ಳದೆ ಇರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾಷಾ ಮತ್ತು ಸಂಸ್ಕೃತಿಯ ಸಂಕೇತವಾಗಿರುವ ಕನ್ನಡ ಧ್ವಜಕ್ಕೆ ಕೂಡಲೇ ನಾಡಧ್ವಜಕ್ಕೆ ಗೌರವ ಕೊಡುವ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮ ಕೈಗೊಂಡು ರಾಜ್ಯದ ಎಲ್ಲ ಕಚೇರಿಯ ಮೇಲೆ ನಾಡಧ್ವಜ ಹಾರಿಸಲು ಸರಕಾರ ಆದೇಶ ಹೊರಡಿಸಬೇಕೆಂದು ಗಡಾದ ಎಚ್ಚರಿಕೆ ನೀಡಿದ್ದಾರೆ.