
ಮೃತಪಟ್ಟ ತಾಯಿ ಎದೆಹಾಲಿಗೆ ಮಗು ಪರದಾಟ ; ಗೋಕಾಕ್ ನಲ್ಲಿ ಭೀಕರ ಕೊಲೆ

ಗೋಕಾಕ್ : ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ ಮಾಡಿದ್ದು ಮಾತ್ರವಲ್ಲದೆ ವೀಡಿಯೋ ಕಾಲ್ ಮೂಲಕ ಸಂಬಂಧಿಗಳಿಗೆ ಕಳುಹಿಸಿದ ಘಟನೆ ಗೋಕಾಕ್ ನಲ್ಲಿ ನಡೆದಿದೆ.
ಜಿಲ್ಲೆಯ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಾರಾಷ್ಟ್ರ ಮೂಲದ ಮಿರಾಬಾಯಿ ಕಬಲಿ(25)ಕೊಲೆಯಾದ ಮಹಿಳೆ.
ಕಬ್ಬು ಕಟಾವು ಗ್ಯಾಂಗ್ ಜೊತೆ ಕೆಲಸಕ್ಕೆ ಬಂದಿದ್ದ ದಂಪತಿಗಳು ಟೆಂಟ್ ನಲ್ಲಿ ವಾಸವಿದ್ದರು. ಬಾಲಾಜಿ ಕಬಲಿ (35) ಎಂಬಾತನಿಂದ ಅಮಾನುಷ ಕೃತ್ಯ ಎಸಗಿದ್ದು ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಕೊಲೆಯಾಗಿ ಬಿದ್ದ ತಾಯಿಯ ಎದೆಹಾಲು ಕುಡಿಯಲು 2ವರ್ಷದ ಮಗು ಪರದಾಡಿದೆ. ಗೋಕಾಕ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತಿ ಪೊಲೀಸ್ ವಶದಲ್ಲಿದ್ದಾನೆ.