Select Page

Breaking : ಮನೆ ಕುಸಿತ ಒಂದೇ ಕುಟುಂಬದ ಏಳು ಜನ ದುರ್ಮರಣ

Breaking : ಮನೆ ಕುಸಿತ ಒಂದೇ ಕುಟುಂಬದ ಏಳು ಜನ ದುರ್ಮರಣ

ಬೆಳಗಾವಿ : ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮನೆ ಕುಸಿದ ಪರಿಣಾಮ ಒಂದೇ ಮನೆಯ ಏಳು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸಂಭವಿಸಿದೆ.

ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಹ
ಮಳೆ ನೀರಿಗೆ ನೆನೆದು ಬಡಾಲ ಅಂಕಲಗಿ ಗ್ರಾಮದದಲ್ಲಿ ಮನೆ ಕುಸಿದಿದೆ. ಗ್ರಾಮದ ಭೀಮಪ್ಪ ಖನಗಾವಿ ಕುಟುಂಬದ ಮನೆ ಕುಸಿದು ಬಿದ್ದಿದ್ದು. ಮೃತರು ಗಂಗವ್ವ ಖನಗಾವಿ ( 50 ) ಸತ್ಯವ್ವ ಖನಗಾವಿ ( 45 ) ಪೂಜಾ ಖನಗಾವಿ ( 8 ) ಸವಿತಾ ಖನಗಾವಿ ( 28 ) ಕಾಶವ್ವ ಕೊಳೆಪ್ಪನವರ್ ( 8 ) ಲಕ್ಷ್ಮೀ ಖನಗಾವಿ (15)  ಅರ್ಜುನ ಖನಗಾವಿ (48) ಮೃತಪಟ್ಟ ದುರ್ದೈವಿಗಳು.

ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಎಸ್‍ಡಿಆರೆಫ್ ಸಿಬ್ಬಂದಿ ದೌಡಾಯಿಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಒಂದೇ ಕುಟುಂಬದ ಏಳು ಜನ ಸಾವನ್ನಪ್ಪಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!