Video : ಮನೆ ಕುಸಿತ ದುರಂತ : ಏಳು ಜನರ ಸಾಮೂಹಿಕ ಅಂತ್ಯಕ್ರಿಯೆ
ಬೆಳಗಾವಿ : ಮನೆ ಗೋಡೆ ಕುಸಿದ ದುರಂತದಲ್ಲಿ ಸಾವಿಗೇಡಾಗಿದ್ದ ಜಿಲ್ಲೆಯ ಬಡಾಲ ಅಂಕಲಗಿ ಗ್ರಾಮದ ಒಂದೇ ಕುಟುಂಬದ ಆರು ಹಾಗೂ ಪಕ್ಕದ ಮನೆಯ ಪುಟ್ಟ ಮಗುವನ್ನು ಜಿಲ್ಲಾಡಳಿತ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಿತು.
ಭೀಮಪ್ಪ ಖನಗಾವಿ ಕುಟುಂಬ ಗುರುವಾರ ತಡರಾತ್ರಿ ಹಳೆ ಮನೆ ಗೋಡೆ ಕುಸಿದಿದ್ದನ್ನು ವೀಕ್ಷಣೆ ಮಾಡಲು ಹೋದ ಸಂದರ್ಭದಲ್ಲಿ, ಮನೆಯ ಮತ್ತೊಂದು ಗೋಡೆ ಬಿದ್ದು ಏಳು ಜನ ಮೃತಪಟ್ಟಿದ್ದಾರೆ. ಗಂಗವ್ವ ಖನಗಾವಿ ( 50 ) ಸತ್ಯವ್ವ ಖನಗಾವಿ ( 45 ) ಪೂಜಾ ಖನಗಾವಿ ( 8 ) ಸವಿತಾ ಖನಗಾವಿ ( 28 ) ಲಕ್ಷ್ಮೀ (15) ಕೇಶವ್ ಖನಗಾವಿ (8) ಅರ್ಜುನ್ ಎಂದು ಗುರುತಿಸಲಾಗಿದೆ.
ಹೊಸ ಮನೆ ಕಟ್ಟುವ ಉದ್ದೇಶದಿಂದ ವಾಸವಿದ್ದ ಮನೆ ತೆರವು ಮಾಡಲಾಗುತ್ತಿತ್ತು. ಮಳೆಯಿಂದಾಗಿ ಕುಸಿದಿದ್ದ ಗೋಡೆ ನೋಡಲು ಕುಟುಂಬದವರು ಒಟ್ಟಾಗಿ ಹೋದ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಮತ್ತೊಂದು ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ. ಅವಶೇಷಗಳಡಿ ಸಿಲುಕಿದ್ದ ಮೂವರನ್ನು ರಕ್ಷಿಸಿ ಬೆಳಗಾವಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಸ್ಥಳದಲ್ಲಿ ಐವರು ಸಾವನಪ್ಪಿದ್ದು ಇಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.