ಮಂಗಳೂರು : ಮಗುವಿನೊಂದಿಗೆ ತಂದೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಮಂಗಳೂರು ನಗರದ ಹೊರವಲಯ ಗುರುಪುರದ ಫಾಲ್ಗುಣಿ ನದಿ ಸೇತುವೆ ಬಳಿ ಘಟನೆ ಸಂಭವಿಸಿದೆ. ಕೈಕಂಬ ನಿವಾಸಿ ಸಂದೀಪ್ ಎಂಬಾತ ತನ್ನ ಪುತ್ರನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇನ್ನೇನು ನದಿಗೆ ಹಾರಬೇಕು ಎನ್ನುವಷ್ಟರಲ್ಲಿ ಆಯತಪ್ಪಿ ಹೊರಗೆ ಜಿಗಿದಿದ್ದಾನೆ. ನಂತರ ನದಿಗೆ ಹಾರಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳಿಯರು ಆತನನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
ಪುಟ್ಟ ಮಗನೊಂದಿಗೆ ನದಿಗೆ ಹಾರಲು ಯತ್ನಿಸಿದ ಘಟನೆ ಸ್ಥಳೀಯರ ಮೋಬೈಲ್ ನಲ್ಲಿ ಸೆರೆಯಾಗಿದೆ. ಇನ್ನೂ ವ್ಯಕ್ತಿಯ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ಯವಾಗಿದೆ.


