Select Page

Advertisement

ಫೆ. 8 ಕ್ಕೆ ವಿಟಿಯು 24ನೇ ವಾರ್ಷಿಕ ಘಟಿಕೋತ್ಸವ ಭಾಗ – 02 : ಪ್ರೊ. ವಿದ್ಯಾಶಂಕರ್ ಎಸ್

ಫೆ. 8 ಕ್ಕೆ ವಿಟಿಯು 24ನೇ ವಾರ್ಷಿಕ ಘಟಿಕೋತ್ಸವ ಭಾಗ – 02 : ಪ್ರೊ. ವಿದ್ಯಾಶಂಕರ್ ಎಸ್

ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24 ನೇ ವಾರ್ಷಿಕ ಘಟಿಕೋತ್ಸವ (ಭಾಗ -2) ಬರುವ ಫೆ. 8 ರ ಶನಿವಾರ ಜ್ಞಾನಸಂಗಮ ಆವರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್ ತಿಳಿಸಿದ್ದಾರೆ‌.

ಬುಧವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಇವರು. ಈಗಾಗಲೇ 24 ನೇ ವಾರ್ಷಿಕ ಘಟಿಕೋತ್ಸವದ ಮೊದಲ ಭಾಗ -1 ಕಳೆದ 2024 ರ ಜುಲೈ 18 ರಂದು ಹಮ್ಮಿಕೊಂಡು ಸ್ನಾತಕ ಮತ್ತು ಸಂಶೋಧನಾ ಪದವಿಗಳನ್ನು ನೀಡಲಾಗಿದೆ. ಈಗ ಘಟಿಕೋತ್ಸವದ ಎರಡನೇ ಭಾಗವಾಗಿ ಫೆ. 8 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ, ಸಂಶೋಧನಾ ಪದವಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ‌.

ಕಾರ್ಯಕ್ರಮದಲ್ಲಿ ರಾಜ್ಯಪಾಲರು ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಖ್ಯಾತ ವಿಜ್ಞಾನಿ ಹಾಗೂ ಕನ್ಯಾಕುಮಾರಿಯ ನೂರುಲ್ ಇಸ್ಲಾಂ ಸೆಂಟರ್ ಫಾರ್ ಹೈಯರ್ ಎಜುಕೇಶನ್ ಕುಲಪತಿ ಡಾ. ಟೆಸ್ಸಿ ಥಾಮಸ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24 ನೇ ವಾರ್ಷಿಕ ಘಟಿಕೋತ್ಸವ ಸಂದರ್ಭದಲ್ಲಿ ಎಂಬಿಎ – 7194, ಎಂ,ಟೆಕ್ – 1313, ಎಂ, ಆರ್ಚ್ – 83, ಎಂ, ಪ್ಲ್ಯಾನ್ – 23 ಪದವಿಗಳ ಜೊತೆ 425 – ಪಿ ಹೆಚ್ ಡಿ,03 – ಎಂ ಎಸ್ಸಿ.ಬೈ ರಿಸರ್ಚ್ ಹಾಗೂ 05 – ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಪದವಿ ಪ್ರದಾನ ಮಾಡಲಾಗುತ್ತಿದೆ. ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾನಿತರಿಗೆ ಫೆ. 08 ಗುರುವಾರ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಲಪತಿ ತಿಳಿಸಿದ್ದಾರೆ‌.


ಕರ್ನಾಟಕವನ್ನು ಜಾಗತಿಕ ಅಧ್ಯಯನ ತಾಣವನ್ನಾಗಿ ರೂಪಿಸಲು ಹಾಗೂ ಸಂಶೋಧನೆ ಮತ್ತು ನಾವಿನ್ಯತೆಗೆ ಒತ್ತು ಕೂಡುವ ಉದ್ದೇಶದಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೊಸದಾದ ಬೋಧನಾ ಆಯಾಮಗಳನ್ನು ರೂಢಿಸಿಕೊಂಡಿದೆ. ಶಿಕ್ಷಣದ ಅಂತರಾಷ್ಟ್ರೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಉತ್ತಮ ಗುಣಮಟ್ಟದ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ತರಬೇತಿ ಕಾರ್ಯಾಗಾರ ಹಾಗೂ ಜ್ಞಾನ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಅಡಚಣೆ ಆಗದಂತೆ ಅಂತರಾಷ್ಟ್ರೀಯ ಶೈಕ್ಷಣಿಕ ಕ್ಯಾಲೆಂಡರ್‌ನೊಂದಿಗೆ ವಿಟಿಯು ಶೈಕ್ಷಣಿಕ ಕ್ಯಾಲೆಂಡರ್‌ ಸರಿ ಹೊಂದಿಸಿ ದಾಖಲೆ ಸಮಯದಲ್ಲಿ ಪರೀಕ್ಷಾ ಫಲಿತಾಂಶವನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.

ಉನ್ನತ ವ್ಯಾಸಂಗ ಜೊತೆಗೆ ಔದ್ಯೋಗಿಕ ಕ್ಷೇತ್ರದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪದವಿ ಮುಗಿದ ತಕ್ಷಣ ಉದ್ಯೋಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಶೈಕ್ಷಣಿಕ ವರ್ಷದಲ್ಲಿ ಎರಡುಬಾರಿ ಘಟಿಕೋತ್ಸವ ಆಯೋಜಿಸಿ ಪ್ರಮಾಣಪತ್ರ ನೀಡುವ ವಿಭಿನ್ನ ಪ್ರಯತ್ನ ಮಾಡಲಾಗುತ್ತಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ ವಿದ್ಯಾಶಂಕರ್ ಎಸ್ ಅವರ ದೂರದೃಷ್ಟಿಯಿಂದ ಕಳೆದ ಎರಡು ಘಟಿಕೋತ್ಸವಗಳಿಂದ ಸ್ನಾತಕ ಪದವಿ ಪ್ರಧಾನಕ್ಕೆ ಭಾಗ – 01 ಹಾಗೂ ಸ್ನಾತಕೋತ್ತರ ಪದವಿಗಳಿಗೆ ಭಾಗ – 02 ರಂತೆ ಒಟ್ಟು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿರುವುದು ಇನ್ನೊಂದು ವಿಶೇಷ.


ಐವರು ವಿದ್ಯಾರ್ಥಿಗಳಿಗೆ 13 ಚಿನ್ನದ ಪದಕ

ಶ್ವೇತಾ ಹೆಚ್.ಯು – ಎಂಬಿಎ – ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್ ಬೆಂಗಳೂರು – ನಾಲ್ಕು ಚಿನ್ನದ ಪದಕ ಪಡೆದುಕೊಂಡಿದ್ದರೆ, ರಚನಾ ಆರ್ – ಎಂಸಿಎ – ಬಿಐಟಿ ಬೆಂಗಳೂರು – ಮೂರು ಚಿನ್ನದ ಪದಕ ಪಡೆದಿದ್ದಾರೆ.

ಅನ್ವಿತಾ ಎಂ. ಕುಮಾರ್ – ಎಂ.ಇ ಸ್ಟ್ರಕ್ಚರಲ್ ಇಂಜಿನಿಯರಿಂಗ್ – ಎಸ್ ಜೆಬಿಐಟಿ ಬೆಂಗಳೂರು. ಯಶಸ್ ಎಲ್ – ಎಂ,ಟೆಕ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ – ಎಸ್,ಜೆ,ಸಿ,ಐ,ಟಿ ಚಿಕ್ಕಬಳ್ಳಾಪುರ‌ ಹಾಗೂ ಸುಪ್ರೀಯಾ ರಜಪೂತ್ – ಎಂ,ಟೆಕ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ – ಕೆಎಲ್ಎಸ್ ವಿಡಿಐಟಿ ಹಳಿಯಾಳ ತಲಾ ಎರಡು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!