ಚನ್ನಮ್ಮ ಮೃಗಾಲಯಕ್ಕೆ ವ್ಹೀಲ್ ಚೇರ್ ವಿತರಿಸಿದ ಅಲನ್ ಮೋರೆ ತಂಡ
ಬೆಳಗಾವಿ : ನಗರದ ಹೊರವಲಯದಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಭೇಟಿ ನೀಡುವ ವೃದ್ಧರಿಗೆ ಹಾಗೂ ವಿಕಲಚೇತನರಿಗೆ ನೆರವಾಗಲು, ಅಲನ್ ವಿಜಯ್ ಮೋರೆ ನೇತೃತ್ವದ ಜೈನ್ ಕಾಲೇಜು ವಿದ್ಯಾರ್ಥಿಗಳ ತಂಡ ವ್ಹೀಲ್ ಚೇರ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೃಗಾಲಯಕ್ಕೆ ಭೇಟಿ ನೀಡುವ ಜನಸಾಮಾನ್ಯರಲ್ಲಿ ವಯಸ್ಸಾದ ವೃದ್ಧರು ಭೇಟಿ ನೀಡುತ್ತಾರೆ ಈ ಸಂದರ್ಭದಲ್ಲಿ ಇಲ್ಲಿ ಸುತ್ತಾಡಲು ತೊಂದರೆ ಆಗುತ್ತದೆ.ಈ ಉದ್ದೇಶದಿಂದ ಯುವಕರ ತಂಡ ಸಹಕಾರಿಯಾಗಿದೆ.
ಈ ಸಂದರ್ಭದಲ್ಲಿ ಪಶುವೈದ್ಯಾಧಿಕಾರಿ ನಾಗೇಶ್ ಹುಯಿಲ್ಗೋಳ್, ಮೃಗಾಲಯ ಪಾಲಕ ರಾಯಪ್ಪ, ಆದಿತ್ಯ ಜಿ, ಅದ್ವೈತ್ ಚವ್ಹಾಣ, ನಿತಿನ್ ಕೊಟಾರಿ, ಆರ್ಯನ್ ನಲವಡೆ, ಅದೃಷ್ಟಶಾಲಿ ಸೋಲಂಕಿ, ಧ್ರುವ ಹಂಜಿ ಮತ್ತಿತರರು ಉಪಸ್ಥಿತರಿದ್ದರು.