Select Page

Advertisement

ರೇಣುಕರ ತತ್ವ ವಿಶ್ವಮಾನ್ಯ:ಡಾ. ತ್ರೀನೇತ್ರ ಮಹಾಂತ ಶ್ರೀ

ರೇಣುಕರ ತತ್ವ ವಿಶ್ವಮಾನ್ಯ:ಡಾ. ತ್ರೀನೇತ್ರ ಮಹಾಂತ ಶ್ರೀ

ಬೆಳಗಾವಿ : ಶ್ರೀ ಜಗದ್ಗುರು ರೇಣುಕರ ತತ್ವ ವಿಶ್ವಮಾನ್ಯವಾಗಿದೆ. ಜಗದ್ಗುರು ರೇಣುಕಾಚಾರ್ಯರು ಶ್ರೀ‌ ಸಿದ್ಧಾಂತ ಶಿಕಾಮಣಿಯಲ್ಲಿ ದಶ ಧರ್ಮ ಸೂತ್ರ‌ ಹೇಳಿದ್ದಾರೆ. ಅಹಿಂಸೆ, ಸತ್ಯ, ಅಸ್ತ್ಯೆಯ, ಬ್ರಹ್ಮಚರ್ಯ, ದಯಾ, ಕ್ಷಮಾ, ಧಾನ, ಪೂಜಾ, ಜಪ, ಧ್ಯಾನ ಎಂಬುದಾಗಿ ದಶ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೆ ಆದರೆ‌ ಎಲ್ಲರ ಬದುಕು ಬಂಗಾರವಾಗುತ್ತದೆ ಎಂದು ಬೇಬಿ ಗ್ರಾಮದ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ ಡಾ. ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ಗುರುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ‌ಹಿರೇಮಠದ ಶಾಖೆಯಲ್ಲಿ ಜರಗುತ್ತಿರುವ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯ ಮಹೋತ್ಸವದಲ್ಲಿ ರೇಣುಕಾಚಾರ್ಯರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಇವತ್ತು ರೇಣುಕರು ಬೋಧಿಸಿದ ಶ್ರೀ‌ ಸಿದ್ಧಾಂತ ಶಿಖಾಮಣಿ 18 ಭಾಷೆಯಲ್ಲಿ ಲಭ್ಯವಿವೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು 18 ಭಾಷೆಯ ಶ್ರೀ ಸಿದ್ಧಾಂತ ‌ಶಿಖಾಮಣಿಯ ಆ್ಯಪ್ ನ್ನು ಬಿಡುಗಡೆಗೊಳಿಸಿರುವುದು ನಮಗೆ ತಿಳಿದಿರುವ ವಿಚಾರ ಎಂದರು.
ಸಾನಿದ್ಯ ವಹಿಸಿ ಮಾತನಾಡಿದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕರು ಹೇಳಿರುವ ವಿಚಾರಗಳು ಎಲ್ಲರಿಗೂ ಪೂರಕವಾಗಿರುವಂಥದ್ದು. ಇವತ್ತು ನಾವೆಲ್ಲರೂ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುವುದು ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರಕಾರ ಆಚರಿಸುತ್ತಿರುವುದು ಅಭಿಮಾನದ ಸಂಗತಿ. ಎಲ್ಲಡೆ ರೇಣುಕರ ವಿಚಾರಗಳು ಹೆಚ್ಚು ಜನಜನಿತವಾಗಲಿ ಎಂದರು.
ವೀರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರಯ್ಯ ಸವಡಿಸಾಲಿಮಠ, ಕಲ್ಲಪ್ಪ ಬೋರಣ್ಣವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಯಡಿಯೂರಿನ ಶ್ರೀ ಸಿದ್ಧಲಿಂಗೇಶ್ವರ ಪಾಠ ಶಾಲೆಯ ಒಟುವೃಂದರು ವಿಶೇಷ ಪೂಜೆ ಸಲ್ಲಿಸಿದರು.

Advertisement

Leave a reply

Your email address will not be published. Required fields are marked *

error: Content is protected !!