ಇಡೀ ಭಾರತವೇ ಬೆಳಗಾವಿಯಲ್ಲಿದೆ : ಸಿಎಂ ಬೊಮ್ಮಾಯಿ
ಬೆಳಗಾವಿ : ಇಡೀ ದೇಶವೇ ಬೆಳಗಾವಿಯಲ್ಲಿ ಇದೆ. ಇಲ್ಲಿನ ಜನರ ರಾಷ್ಟ್ರ, ಭಾಷೆಗೆ ಹಾಗೂ ನಮ್ಮ ಕನ್ನಡದ ಬಗ್ಗೆ ಅಭಿಮಾನ ಹೊಂದಿರುವ
ಜನ ಇಲ್ಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನೂತನವಾಗಿ ಆಯ್ಕೆಯಾದ ಮಹಾನಗರ ಪಾಲಿಕೆ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇವರು. ಬೆಳಗಾವಿ ಜನ ಪಾಲಿಕೆ ಚುನಾವಣೆಯಲ್ಲಿ ಜಾತಿ ಹಾಗೂ ಭಾಷೆ ಮೀರಿ ಬಿಜೆಪಿಗೆ ಬೆಂಬಲಿಸಿದ್ದನ್ನು ನಾವು ಎಂದು ಮರೆಯುದಿಲ್ಲ. ಅಭಿವೃದ್ಧಿ ಮುಖಾಂತರ ಪಾಲಿಕೆ ಅಭಿವೃದ್ಧಿ ಮಾಡುತ್ತೇವೆ ಎಂದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬೆಳಗಾವಿ ಜನ ಬಿಜೆಪಿ ಮೇಲೆ ವಿಶ್ವಾಸವಿಟ್ಟು ಈ ಬಾರಿ ಮಹಾನಗರ ಪಾಲಿಕೆ ನಮ್ಮ ಕೈಗೆ ಕೊಟ್ಟಿದ್ದು ನಮ್ಮ ಮೇಲೆ ದೊಡ್ಡ ಜವಾಬ್ದಾರಿ ನೀಡುದ್ದು, ನೂತನ ಸದಸ್ಯರು ಕೆಲಸ ಮಾಡಿ ಜನರ ವಿಶ್ವಾಸ ಗಳಿಸಬೇಕು ಎಂದರು.