ಬೆಳಗಾವಿ : ಕೋರ್ಟ್ ನಲ್ಲಿ ನಡೆದ ಒಂದು ಪ್ರಕರಣಕ್ಕೆ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲಿಸಿ ಕೋರ್ಟ್ ಕಲಾಪದಲ್ಲಿ ಹಾಜರಾದ ಘಟನೆ ಮೂಡಲಗಿ ನ್ಯಾಯಾಲಯದಲ್ಲಿ ನಡೆದಿದೆ.
ಮೂಡಲಗಿ ಪಟ್ಟಣದ ಹಿರಿಯ ವಕೀಲರಾದ ಸುಧೀರ ಗೋಡಿಗೌಡರ ಅವರ ಕುಟುಂಬದ ವೈಯಕ್ತಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಡೆದ ಕೋರ್ಟ್ ಕಲಾಪದಲ್ಲಿ ಸುಧೀರ್ ಅವರನ್ನು ಬೆಂಬಲಿಸಿ ಗೋಕಾಕ್ ಹಾಗೂ ಮೂಡಲಗಿ ನ್ಯಾಯಾಲಯದ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಾರು ವಕೀಲರು ಭಾಗವಹಿಸಿದ್ದು ಗಮನಸೆಳೆಯಿತು. ಈ ವೇಳೆ ವಕೀಲ ಸುಧೀರ್ ಅವರು ತಮ್ಮ ಪ್ರತಿಸ್ಪರ್ಧಿ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ಈ ಸಮಯದಲ್ಲಿ ಹಿರಿಯ ನ್ಯಾಯವಾದಿ ಎಸ್ ಎಮ್ ಹತ್ತಿಕಟ್ಟಗಿ, ಆರ್.ಎಚ್ ಇಟ್ನಾಳ , ಹಾಗೂ ಗೋಕಾಕ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ ಹುಕ್ಕೇರಿ, ಬಿ.ಎಲ್ ಮಾಳೇದ, ಜಿ.ಎಂ.ಭಟ್ಟಿ , ಎಸ್ ಡಿ, ಪತ್ತಾರ, ಬಿ.ಬಿ ಖಾನಾಪೂರ. ಜೋಕಿ, ಎಸ್.ಎಲ್ ಪಾಟೀಲ ಮುಂತಾದ ವಕೀಲರು ಹಾಜರಿದ್ದರು.
ಒಂದು ಕೇಸ್, 200 ವಕೀಲರು ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಮೂಡಲಗಿ ನ್ಯಾಯಾಲಯ



