
ಸಚಿವರ ಸೂಚನೆಗೂ ತಲೆಕೆಡಿಸಿಕೊಳ್ಳದ ಹೆಸ್ಕಾಂ ಸಿಬ್ಬಂದಿ ; ಸಂಕಷ್ಟದಲ್ಲಿ ಕುಕಡೊಳ್ಳಿ ಗ್ರಾಮಸ್ಥರು

ಬೆಳಗಾವಿ : ಖುದ್ದು ಸಚಿವರೇ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಜನರ ಸಮಸ್ಯೆಗೆ ತ್ವರಿತ ಪರಿಹಾರ ನೀಡುವಂತೆ ಸೂಚನೆ ನೀಡಿದ್ದರು ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಗ್ರಾಮಸ್ಥರು ಪ್ರತಿದಿನ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ತಾಲೂಕಿನ ಕುಕಡೊಳ್ಳಿ ಗ್ರಾಮದ ಸೋಮೇಶ್ವರ ನಗರ ಹಾಗೂ ಗಣೇಶ ನಗರದಲ್ಲಿ ಪ್ರತಿದಿನ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಸಧ್ಯ 25 ಕೆ.ವಿ ವಿದ್ಯುತ್ ಟ್ರಾನ್ಪರ್ಮರ್ ಇದ್ದು ಇದರಿಂದ ಎರಡೂ ನಗರಗಳಿಗೆ ವಿದ್ಯುತ್ ಪೂರೈಕೆ ಸಮಸ್ಯೆ ಆಗುತ್ತಿದ್ದು ಇದನ್ನು 63 ಕೆ.ವಿ ಬದಲಾಯಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗಮನಕ್ಕೆ ತಂದಿದ್ದು, ಅಚಿವರು ಕೂಡಲೇ ಹೆಸ್ಕಾಂ ನ ಹಿರೇಬಾಗೇವಾಡಿ ಶಾಖಾಧಿಕಾರಿ ಡಿ ಬಿ ಕಟ್ಟಿಮನಿ ಗನಕ್ಕೆ ತಂದು ಸೂಚನೆ ನೀಡಿ ಎರಡು ತಿಂಗಳು ಕಳೆದರು ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆ ಹೊರ ಹಾಕಿದ್ದಾರೆ.