ಸವದತ್ತಿ ಯಲ್ಲಮ್ಮ ದೇವಸ್ಥಾನ ಹುಂಡಿ ಎಣಿಕೆ ; ಹರಿದುಬಂದ ಕೋಟ್ಯಾಂತರ ರೂ. ಕಾಣಿಕೆ
ಸವದತ್ತಿ : ಐತಿಹಾಸಿಕ ಸವದತ್ತಿ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ಎರಡು ತಿಂಗಳ ಅವಧಿಯ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದ್ದು, ಕೋಟ್ಯಾಂತರ ರೂ. ಹಣ ಸಂಗ್ರಹವಾಗಿದೆ.
ಮೇ 25ರಿಂದ ಜುಲೈ 20 ರವರೆಗೆ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಹಾಕಿದ್ದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು. ಈ ಸಂದರ್ಭದಲ್ಲಿ 1 ಕೋಟಿ 48,95,404 ಕಾಣಿಕೆ ಸಂಗ್ರಹವಾಗಿದೆ.
ಅಷ್ಟೇ ಅಲ್ಲದೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸಂಗ್ರಹವಾಗಿದ್ದು, ಹುಂಡಿಯಲ್ಲಿ 1.35 ಕೋಟಿ ಹಣ, 11.79 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ಮೌಲ್ಯದ ಬೆಳ್ಳಿ ಆವರಣವನ್ನು ಭಕ್ತರು ದೇವಿಗೆ ಸಮರ್ಪಿಸಿದ್ದಾರೆ.
ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳು, ಮುಜರಾಯಿ ಇಲಾಖೆ ಬೆಳಗಾವಿ ಸಹಾಯಕ ಆಯುಕ್ತರ ಕಚೇರಿ ಅಧೀಕ್ಷಕರು, ಸವದತ್ತಿ ತಹಶೀಲ್ದಾರ ಕಚೇರಿ ಅಧಿಕಾರಿಗಳು, ಸವದತ್ತಿ ಠಾಣೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮೂರು ದಿನ ಹುಂಡಿ ಹಣ ಎಣಿಸಲಾಯಿತು.
ಈ ಸಂದರ್ಭದಲ್ಲಿ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಪಿಬಿ ಮಹೇಶ, ವೈ.ವೈ.ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಲಕ್ಷ್ಮಿ ಹೂಲಿ, ನಾಗರತ್ನಾ ಚೋಳಿನ, ಬಾಳೇಶ ಅಬ್ಬಾಯಿ,
ಎಂ.ಎಸ್.ಯಲಿಗಾರ, ಎಂ.ಪಿ.ದ್ಯಾಮನಗೌಡ್ರ, ಡಿ.ಆರ್.ಚವ್ಹಾಣ, ಅಲ್ಲಮಪ್ರಭು ಪ್ರಭುನವರ, ಸಿ.ಎನ್.ಕುಲಕರ್ಣಿ, ಆನಂದ ಗೊರವನಕೊಳ್ಳ, ಡಿ.ಡಿ.ನಾಗನಗೌಡ್ರ, ದೇವಸ್ಥಾನ ಸಿಬ್ಬಂದಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಇದ್ದರು.