ವಂದೇ ಭಾರತ್ ರೈಲಿಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ
ಬೆಳಗಾವಿ : ಬೆಳಗಾವಿ ಜನರ ಬಹುದಿನಗಳ ಕನಸು ಈಡೇರಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕನಸಿನ ಯೋಜನೆ ಬೆಳಗಾವಿ ಜನರ ಮನೆಬಾಗಿಲಿಗೆ ತಲುಪಿದ್ದು ಸೋಮವಾರ ರಾತ್ರಿ ಎಕ್ಸ್ಪ್ರೆಸ್ ರೈಲಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಮಹಾರಾಷ್ಟ್ರದಿಂದ ಪುಣೆ, ಮಿರಜ್ , ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟ ವಂದೇ ಭಾರತ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಬರಮಾಡಿಕೊಂಡರು. ಸಂಸದ ಜಗದೀಶ ಶೆಟ್ಟರ್, ಹಾಲಿ, ಮಾಜಿ ಶಾಸಕರು ಸಾಥ್ ನೀಡಿದರು.
ಮಹಾರಾಷ್ಟ್ರ ಕರ್ನಾಟಕ ನಡುವೆ ಸೋಮವಾರ ದಿಂದ ಸಂಚಾರ ಆರಂಭಿಸಿದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಭಾರತೀಯ ರೈಲ್ವೆಗೆ ಪ್ರಯಾಣದ ಹೊಸ ತಂತ್ರಜ್ಞಾನವನ್ನು ತೋರಿಸಿದೆ. ಈ ಸೆಮಿ ಹೈ ಸ್ಪೀಡ್ ರೈಲು ಇದು ಶತಾಬ್ದಿ ಎಕ್ಸ್ ಪ್ರಸ್ ಗಿಂತ ಹೆಚ್ಚು ವೇಗವಾಗಿ ಚಲಿಸುತ್ತದೆ ಎನ್ನಲಾಗಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ವೈ ಫೈ ಸೌಲಭ್ಯವಿದೆ. ಪ್ರಯಾಣಿಕರು ತಮ್ಮ ಮೊಬೈಲ್ ಅಥವಾ ಟ್ಯಾಬ್ನಲ್ಲಿ ವೈ ಫೈ ಪಡೆಯಬಹುದು. ಸಂಪೂರ್ಣ ಹವಾನಿಯಂತ್ರಿತ ಕೋಚ್‌ಗಳನ್ನು ಒಳಗೊಂಡಿದೆ.ಕೋಚ್‌ಗಳಲ್ಲಿ ಸ್ವಯಂಚಾಲಿತ ಬಾಗಿಲುಗಳಿವೆ.
ರೈಲುಗಳು ನೈರ್ಮಲೀಕರಣದ ಸಮಸ್ಯೆಯಿಂದ ಹೊರಬರಲು ಈ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಜೈವಿಕ ನಿರ್ವಾತ ಶೌಚಗೃಹ ಸೌಲಭ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಟಚ್ ಫ್ರೀ ಬಾತ್ರೂಮ್ ಫಿಟ್ಟಿಂಗ್ ಸೌಲಭ್ಯವನ್ನು ಈ ರೈಲು ಹೊಂದಿದೆ. ಅಲ್ಲದೆ ಸೆಮಿ-ಹೈ ಸ್ಪೀಡ್ ಆಗಿರುವ ಕಾರಣ, ರೈಲಿನಲ್ಲಿ ಊಟವನ್ನು ಟಿಕೆಟ್ ದರದಲ್ಲಿ ಸೇರಿಸಲಾಗಿದೆ.
ಮೆಟ್ರೋ ಅಥವಾ ಬುಲೆಟ್ ಟ್ರೈನ್ಗಳ ಮಾದರಿಯಂತೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂಜಿನ್ ಇರುವುದಿಲ್ಲ. ನೀವು
ನೋಡಬಹುದು.ಈ ಹಿಂದೆ ಭಾರತೀಯ ರೈಲ್ವೇಯು ಪ್ರತ್ಯೇಕವಾಗಿ ಇಂಜಿನ್ ಕೋಚ್ ಅನ್ನು ಅಳವಡಿಸುತಿತ್ತು. ಆದರೆ ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಎಂಜಿನ್ ಅನ್ನು ಅದರೊಳಗೆ ಸಂಯೋಜಿಸಲಾಗಿದೆ.