ಮಾರುದ್ದ ಬೆಳೆದ ಮಗನ ದೇಹ ಕೈಚೀಲದಲ್ಲಿ ; ಜಿಲ್ಲಾಡಳಿತಕ್ಕೆ ಒಂದು ಬಾಕ್ಸ್ ಸಿಗಲಿಲ್ವ…? ಪುತ್ರ ಶೋಕಂ ನಿರಂತರಂ…!
ಬೆಳಗಾವಿ : ಎಷ್ಟೇ ಆಗ್ಲಿ ಹೆತ್ತವರ ಮುಂದೆ ಮಕ್ಕಳ ಸಾವಿನ ನೋವು ಇದೆಯಲ್ಲ ಅದು ಯಾರಿಗೂ ಬೇಡ. ಪುತ್ರ ಶೋಕಂ ನಿರಂತರಂ ಎಂಬ ಮಾತಿದೆ. ಆದರೆ ಹೆತ್ತ ಮಗನ ಪಾರ್ಥಿವ ಶರೀರ ಕೈಚೀಲದಲ್ಲಿ ಹಿಡಿದು ಸಾಗಬೇಕಾದದ್ದು ಯಾವ ಜನ್ಮದ ಪಾಪ.
ಅಗ್ನಿ ಅವಘಡದಲ್ಲಿ ಮಗ ಸುಟ್ಟ ಕರಕಲಾಗಿದ್ದ, ಅಳಿದುಳಿದ ದೇಹದ ತುಂಡನ್ನು ಜಿಲ್ಲಾಡಳಿತ ಒಂದು ಚೀಲದಲ್ಲಿ ಹಾಕಿ ತಂದೆಯ ಕೈಗೆ ಇಟ್ಟಿತ್ತು. ಅದನ್ನೇ ಹಿಡಿದ ತಂದೆ ಮಾರುದ್ದ ಬೆಳೆದ ಮಗನ ದೇಹ ಕೈಚೀಲಲ್ಲಿ ಹಿಡಿದು ಸಾಗುವುದು ಎಂತಹ ನೋವಿನ ಸಂಗತಿ.
ಮಂಗಳವಾರ ಬೆಳಗಾವಿ ನಗರದ ನಾವಗೆ ಗ್ರಾಮದ ಹೊರವಲಯದಲ್ಲಿರುವ ಸ್ನೇಹಂ ಅಂತಾರಾಷ್ಟ್ರೀಯ ಇನ್ಸುಲಿನ್ ಟೇಪ್ ಉತ್ಪಾದನಾ ಕಾರ್ಖಾಗೆ ಬೆಂಕಿ ತಗುಲಿದ ಪರಿಣಾಮ ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದ.
ಸುಟ್ಟು ಕರಕಲಾದ ಯಲ್ಲಪ್ಪ ಗುಂಡ್ಯಾಗೋಳ ( 20 ) ಮೃತದೇಹವನ್ನು ಅಧಿಕಾರಿಗಳು ಕೈಚೀಲದಲ್ಲಿ ತುಂಬಿ ತಂದೆಯ ಕೈಗೆ ಕೊಟ್ಟಿದ್ದಾರೆ. ಕೊನೆ ಪಕ್ಷ ಆ ಬೂದಿಯನ್ನು ಒಂದು ಬಾಕ್ಸ್ ನಲ್ಲಿ ಹಾಕಿ ನ್ಯಾಯಯುತವಾಗಿ ಮನೆಗೆ ಕಳಿಸಬೇಕಿತ್ತು. ಆದರೆ ತಂದೆ ಅದೇ ಕೈಚೀಲ ಹಿಡಿದು ಮನೆಗೆ ತೆರಳಿದ್ದ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ನೋಡ, ನೋಡುತ್ತಿದ್ದಂತೆ ಇಡೀ ಕಾರ್ಖಾನೆ ವ್ಯಾಪಿಸಿತ್ತು. ಘಟನೆಯಲ್ಲಿ ಮಾರ್ಕಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ ( 20 ) ಸಂಪೂರ್ಣ ಸುಟ್ಟು ಕರಕಲಾಗಿದ್ದರೆ.
ಬೆಳಗಾವಿಯ ನಗರದ ಮಾರುತಿ ನಾರಾಯಣ ಕಳವೇಕರ ( 32 ), ಹಳೆ ಬೆಳಗಾವಿಯು ಯಲ್ಲಪ್ಪ ಸಲಗುಡೆ ( 35 ) ಝಾಪವಾಡಿಯ ರಂಜಿತ್ ಪಾಟೀಲ ( 39 ) ಈ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.