VIDEO – ಬೆಳಗಾವಿಯಲ್ಲಿ ಫ್ಯಾಷನ್ ಶೋ : ರಂಗು ರಂಗಿನ ನಡಿಗೆಗೆ ಮಾರುಹೋದ ಜನತೆ
ಬೆಳಗಾವಿ : ರಂಗು ರಂಗಿನ ಉಡುಗೆಗಳನ್ನು ತೊಟ್ಟ ಯುವತಿಯರು. ಕಣ್ಮನ ಸೆಳೆಯುವ ಮುದ್ದಾದ ನೋಟ. ಮಹಿಳೆಯರ ರಕ್ಷಣೆ ಕುರಿತಾದ ಜಾಗೃತಿ. ಇವೆಲ್ಲವೂ ಒಂದೇ ವೇದಿಕೆಯಲ್ಲಿ ಕಾಣಬಹುದಾದ ಕಾರ್ಯಕ್ರಮ ನಗರದಲ್ಲಿ ಶನಿವಾರ ಜರುಗಿತ್ತು.
ನಗರದ ಕೆಲ್ಇ ಸಂಸ್ಥೆಯ ಡಾ. ಜಿರಿಗೆ ಸಭಾ ಭವನದಲ್ಲಿ ಕೆಎಲ್ಇ ಫ್ಯಾಷನ್ ಟೆಕ್ನಾಲಜಿ ವಿದ್ಯಾಲಯದ ವಿದ್ಯಾರ್ಥಿನಿಯರಿಂದ ವಿನ್ಯಾಸ – 2021 ಫ್ಯಾಷನ್ ಶೋ ನಡೆಯಿತು.
31 ಮಾಡೆಲ್ ಗಳು ಕ್ಯಾಟ್ ವಾಕ್ ಮಾಡುತ್ತಾ 150 ವಿನ್ಯಾಸ ಪ್ರದರ್ಶನ ಮಾಡಿದರು, ಜೊತೆಯಲ್ಲಿ ಅನೇಕ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು. ಮುಖ್ಯ ಅತಿಥಿಗಳಾಗಿ ಮಿಸ್ ಪ್ರಿನ್ಸೆಸ್ ಇಂಡಿಯಾ – 2019 ಮತ್ತು ಮಿಸ್ ವರ್ಲ್ಡ್ ಸೂಪರ್ ಮಾಡಲ್ ಏಷಿಯ – 2019 ಆಗಿರುವ ಮಿಸ್ ಸ್ನೇಹಲ್ ಬಿರ್ಜೆ ಉಪಸ್ಥಿತರಿರುವರು.
ಸ್ಪರ್ಧೆಯಲ್ಲಿ ಪಾಲ್ಗೊಂಡ 31 ಮಾಡೆಲ್ ಗಳು ವಿವಿಧ ವಸ್ತ್ರ ವಿನ್ಯಾಸಗಳಲ್ಲಿ ಕ್ಯಾಟ್ ವಾಕ್ ಮಾಡಿ ನೋಡುಗರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ನೂರಾರು ಯುವಕ ಯುವತಿಯರು ಪಾಲ್ಗೊಂಡು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಇಂದಿನ ದಿನಮಾನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಜಾಗೃತಿ ಮಾಡಿದ್ದು ವಿಶೇಷ.