
ಯತ್ನಾಳ್ ಸಿಡಿ ಬಿಡುಗಡೆಗೆ ಕ್ಷಣಗಣನೆ…? ದಾಖಲಾಯ್ತು FIR

ಬೆಂಗಳೂರು : ಬಿಜೆಪಿ ಹಿರಿಯ ನಾಯಕ ಹಾಗೂ ಹಿಂದುತ್ವದ ಫೈರ್ ಬ್ರ್ಯಾಂಟ್ ಎಂದೇ ಗುರುತಿಸಿಕೊಂಡಿರುವ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಪೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಈ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪೋಟೋ ಹರಿದಾಡುತ್ತಿದ್ದು ಈ ಕುರಿತು ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಸಧ್ಯದಲ್ಲೇ ಬಿಜೆಪಿ ಹಿಂದೂ ಹುಲಿಯ ಸಿಡಿ ಬಿಡುಗಡೆ ಆಗಲಿದ್ದು ಭರ್ಜರಿ ಪ್ರದರ್ಶನ ಕಾಣಲಿದೆ ಎಂಬ ಪೋಸ್ಟ್ ಮಾಡಲಾಗಿದೆ.

ಈ ಕುರಿತು ಪೋಸ್ಟ್ ಮಾಡಿರುವ ನಮ್ಮ ಕಾಂಗ್ರೆಸ್ ಫೇಸ್ಬುಕ್ ಪುಟದ ವಿರುದ್ಧ ಯತ್ನಾಳ್ ಬೆಂಬಲಿಗ ಲಕ್ಷ್ಮಣ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಸನಗೌಡ ಯತ್ನಾಳ್ ಅವರ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಬೆಂಬಿಡದೆ ಬಿಜೆಪಿಗೆ ಸುತ್ತಿಕೊಳ್ಳುತ್ತಿರು ಸಿಡಿ ಪ್ರಕರಣಕ್ಕೆ ಕೊನೆ ಎಂದು ಎಂಬ ಚಿಂತೆಯಲ್ಲಿ ಕಾರ್ಯಕರ್ತರಿದ್ದು. ನಮ್ಮ ನಾಯಕನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಾನವನಲ್ಲ ಎಂದ ಸದಾನಂದ : ಅಶ್ಲೀಲ ವೀಡಿಯೋ ಗೌಡರ ಸ್ಪಷ್ಟನೆ – https://belagavivoice.com/sadhanand_gowda_react_fake_sex_video/#.YW2khUCc8uV.whatsapp