ಚಿಕ್ಕೋಡಿಗೆ ಪಾಕಿಸ್ತಾನದ ನಂಟು….? ಪಾಕ್ ದೇಶದ ನೋಟ್ ಪತ್ತೆ !
ಚಿಕ್ಕೋಡಿ : ಪಾಕಿಸ್ತಾನ ದೇಶದ ಹತ್ತು ರೂಪಾಯಿ ಮುಖ ಬೆಲೆ ನೋಟ್ ವೊಂದು ತಾಲೂಕಿನ ಕರೋಶಿ ಗ್ರಾಮದಲ್ಲಿನ ರಸ್ತೆ ಮೇಲೆ ಯುವಕನೋರ್ವನಿಗೆ ಸಿಕ್ಕಿದೆ.
ಕರೋಶಿ ಗ್ರಾಮದ ಬಸ್ ನಿಲ್ದಾಣ ಬಳಿ 10 ರೂಗಳ ಮುಖ ಬೆಲೆ ನೋಟ್ ಪತ್ತೆಯಾಗಿರುವದರಿಂದ ಇದೀಗ ಕರೋಶಿ ಗ್ರಾಮದಲ್ಲಿ ಭಾರಿ ಸಂಚಲನ ಮೂಡಿಸಿದೆ.ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ ಅಲಿ ಜಿನ್ನಾ ಅವರ ಭಾವಚಿತ್ರವನ್ನು ಹೊಂದಿದೆ. ಆಂಗ್ಲ ಭಾಷೆಯಲ್ಲಿ ನೋಟಿನ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಹಾಗೂ ಉರ್ದು ಭಾಷೆಯಲ್ಲಿ ಅನ್ಯ ಮಾಹಿತಿ ಮುದ್ರುಸಲಾಗಿದೆ.
ನೋಟ್ ದೊರೆತ ಯುವಕನೋರ್ವ ಪಾಕಿಸ್ತಾನದ ಚಿಕ್ಕೋಡಿ ಪೋಲಿಸ್ ಠಾಣೆಗೆ ತಂದು ಒಪ್ಪಿಸಿದ್ದಾನೆ.ಈ ನೋಟ್ ನಕಲಿಯೋ ಅಸಲಿಯೋ ಎಂಬುದರ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲವಿದೆ.ಇನ್ನು ಗ್ರಾಮದಲ್ಲಿ ಐತಿಹಾಸಿಕ ದರ್ಗಾವಿದೆ ಇದೆ.ಈ ದರ್ಗಾಕ್ಕೆ ವಿವಿಧ ರಾಜ್ಯಗಳಿಂದ ಹಲವಾರು ಜನರು ಇಲ್ಲಿಗೆ ಆಗಮಿಸುತ್ತಾರೆ.ಕರೋಶಿ ಗ್ರಾಮದಲ್ಲಿ ಎಲ್ಲಾ ಧರ್ಮದ ಜನರು ವಾಸಿಸುತ್ತಾರೆ.ಸೌಹಾರ್ಧತೆಯಿದೆ ಜೀವನ ಸಾಗಿಸುತ್ತಾರೆ.
ಇದೀಗ ಪಾಕಿಸ್ತಾನದ ನೋಟ್ ಪತ್ತೆಯಾಗಿರುವದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.ಕರೋಶಿ ಗ್ರಾಮದಲ್ಲಿ 12 ಸಾವಿರ ಜನಸಂಖ್ಯೆ ಹೊಂದಿದೆ.ಕರೋಶಿ ಗ್ರಾಮವು ಈ ಹಿಂದೆ ಗಾಂಧಿ ಗ್ರಾಮ ಪುರಸ್ಕಾರ ಪಡೆದುಕೊಂಡಿದೆ.ಇದೀಗ ಅನ್ಯ ದೇಶದ ನೋಟ್ ಇಲ್ಲಿ ಪತ್ತೆ ಹೇಗೆ ಆಯಿತ್ತು ಅಲ್ಲಿನ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.ನೋಟ್ ದೊರತೆ ಯುವಕ ಚಿಕ್ಕೋಡಿ ಪಿಎಸ್ ಐ ಯಮನಪ್ಪಾ ಮಾಂಗ ಅವರಿಗೆ ಒಪ್ಪಿಸಿದ್ದಾನೆ ಅವರು ಈ ಕುರಿತು ಅಲ್ಲಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಇನ್ನು ನೋಟ್ ಪತ್ತೆಯಾಗುತ್ತಿದಂತೆ ಪೋಲಿಸರು ಗುಪ್ತಚರ ಇಲಾಖೆಯವರು ಪುಲ್ ಅಲರ್ಟ ಆಗಿ ಚುರಕಿನ ತನಿಖೆ ನಡೆಸುತ್ತಿದ್ದಾರೆ. 10 ರೂ ಮುಖ ಬೆಲೆ ನೋಟ್ ಅಸಲಿಯೋ ಅಥವಾ ನಕಲಿಯೋ ಎಂಬದು ಇನ್ನು ಸೂಕ್ತ ತನಿಖೆಯಿಂದಷ್ಟೇ ತಿಳಿದು ಬರಲಿದೆ.ಇನ್ನು ಈ ಗ್ರಾಮದ ಜೊತೆ ಪಾಕಿಸ್ತಾನ ದೇಶದವರ ಜೊತೆ ನಂಟು ಇದೇನಾ ಎಂಬ ಗುಮಾನಿ ಸಹ ಇದೆ ಒಟ್ಟಿನಲ್ಲಿ ನೋಟ್ ಅಸಲಿನಾ ನಕಲಿನಾ ಎಂಬುದು ಇನ್ನು ತನಿಕೆಯಿಂದಷ್ಟೇ ತಿಳಿದು ಬರಲಿದೆ.ಇನ್ನು ಯಾರೋ ಕೆಲ ಕೀಡಿಗೇಡಿಗಳು ಇಂತಹ ನೋಟನ್ನು ಗ್ರಾಮದಲ್ಲಿ ಉದ್ದೇಶ ಪೂರ್ವವಕವಾಗಿ ಇಟ್ಟರಾ ಎಂಬ ಸಂಶಯ ಸಹ ಮೂಡುತ್ತಿದೆ.