ಆಕಸ್ಮಿಕ ಬೆಂಕಿ ಅವಗಡ : ಕುಟುಂಬದವರಿಗೆ ಮಾರುತಿ ಅಷ್ಟಗಿ ಸಾಂತ್ವನ
ಬೆಳಗಾವಿ : ಯಮಕನಮರ್ಡಿ ವಿಧಾನಸಭಾ ಕ್ಷೇತ್ರದ ಪಾಶ್ಚಾಪೂರ ಗ್ರಾಮದ ಕಲ್ಲಪ್ಪ ಮಡಿವಾಳ ಎಂಬುವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಆಕಸ್ಮಿಕ ಬೆಂಕಿ ತಗುಲಿದ್ದ ಮನೆಗೆ ಅಪಾರ ಪ್ರಮಾಣ ದ ಹಾನಿಯಾಗಿ ಬದುಕು ಬೀದಿಗೆ ಬಂದಂತಾಗಿತ್ತು. ಜೊತೆಗೆ ಪಕ್ಕದ ಸುರೇಶ ಮಡಿವಾಳರ ಮನೆಯು ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದು ಸುದ್ದಿ ತಿಳಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರವಾಗಿ ಇವರು
ಎರಡೂ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ನೀಡಿ ಧೈರ್ಯ ತುಂಬಿ ಸಾಂತ್ವನ ಹೇಳಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ತುರ್ತಾಗಿ ಕ್ರಮವಹಿಸುವಂತೆ ಸೂಚಿಸಿದರು.