ನಾನವನಲ್ಲ ಎಂದ ಸದಾನಂದ : ಅಶ್ಲೀಲ ವೀಡಿಯೋ ಗೌಡರ ಸ್ಪಷ್ಟನೆ
ಬೆಂಗಳೂರು : ಮಾಜಿ ಕೇಂದ್ರ ಸಚಿವ ಡಿ. ವಿ ಸದಾನಂದಗೌಡ ಅವರದು ಎನ್ನಲಾದ ರಾಸಲೀಲೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರ ಕುರಿತು ಸ್ವತಃ ಮಾಜಿ ಸಚಿವರೇ ಸ್ಪಷ್ಟನೆ ನೀಡಿದ್ದು ವೀಡಿಯೋ ತಿರುಚಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು. ನನ್ನ ಸಾರ್ವಜನಿಕ ಬದುಕಿಗೆ ಮಸಿ ಬಳಿಯಲು ಕಿಡಿಗೇಡಿಗಳು ಈ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಯಾರೂ ಈ ವೀಡಿಯೋ ಮತ್ತೊಬ್ಬರಿಗೆ ಕಳುಹಿಸಬಾರದು. ಅಕಸ್ಮಾತ್ ಕಳುಹಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಯುವತಿಯ ಜೊತೆ ವೀಡಿಯೋ ಕಾಲ್ ನಲ್ಲಿ ಅಶ್ಲೀಲ ಸಂಭಾಷಣೆ ಮಾಡಿದ ವೀಡಿಯೋ ಇದಾಗಿದ್ದು ಸಧ್ಯ ಸೋಶಿಯಲ್ ಮೀಡಿಯಾ ತುಂಬ ಹರಿದಾಡುತ್ತಿದೆ. ಸದಾನಂದಗೌಡ ಅವರ ಪೋಟೋ ಸ್ಪಷ್ಟವಾಗಿ ಈ ವೀಡಿಯೋದಲ್ಲಿ ಕಾಣಿಸುತ್ತಿದ್ದು ಸಚಿವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.