ವಿಜಯೇಂದ್ರ ಗಂಡಸಾಗಿದ್ರೆ ದಾಖಲೆ ಕೊಡು ; ಸಿಡಿದೆದ್ದ ಡಿ.ಕೆ ಶಿವಕುಮಾರ್
ಬೆಂಗಳೂರು : ನನ್ನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಲಾಗುತ್ತಿದೆ. ವಿಜಯೇಂದ್ರ ಗಂಡಸಾಗಿದ್ರೆ ದಾಖಲೆ ಕೊಡಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಮುಡಾ ವಿರುದ್ಧ ಹಮ್ಮಿಕೊಳ್ಳಲಿರುವ ಪಾದಯಾತ್ರೆಗೆ ಟಕ್ಕರ್ ಕೊಡಲು ಶುಕ್ರವಾರ ಕಾಂಗ್ರೆಸ್ ಬಿಡದಿಯಲ್ಲಿ ಕಾಂಗ್ರೆಸ್ ಜನಾಂದೋಲನ ಯಾತ್ರೆಯಲ್ಲಿ ಮಾತನಾಡಿದ ಇವರು. ವಿಜಯೇಂದ್ರ ನನ್ನ ಭ್ರಷ್ಟಾಚಾರದ ಪಿತಾಮಹ ಎಂದು ಹೇಳಿದ್ದಕ್ಕೆ ದಾಖಲೆ ಕೊಡಲಿ. ನಾನು ಯಾವ ಆರೋಪ ಹೊತ್ತಿದ್ದೇನೆ ಎಂದು ಸ್ಪಷ್ಟಪಡಿಸಲಿ ಆಗ ನಾನು ಅವರನ್ನು ಗೌರವಿಸುವೆ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಮಾಡಿದ ಹಗರಣಕ್ಕೆ ಜವಾಬ್ದಾರಿ ಯಾರು? ಯಾರು ಸಿಎಂ ಆಗಿದ್ರು, ಯಾವ ಬ್ಯಾಂಕ್‌ಗೆ ಹಣ ಹೋಗಿದೆ ಎಂಬ ಬಗ್ಗೆ ಮಾಹಿತಿ ಕೊಡಬೇಕು. ಪಾದಯಾತ್ರೆಯಲ್ಲಿ ನಾವು ಪ್ರಶ್ನೆ ಕೇಳ್ತಿದ್ದಕ್ಕೆ ಅವ್ರು ಉತ್ತರ ಕೊಡಬೇಕು. ನಮ್ಮನ್ನ ಜೈಲಿಗೆ ಹಾಕಿಸಬೇಕು ಅಂತಾ ಸಂಚು ನಡೆಯುತ್ತಿದೆ. ನಾನು ಜೈಲಿಗೆ ಹೋಗೋಕು ರೆಡಿ ಇದ್ದೀನಿ ಎಂದು ತಿಳಿಸಿದ್ದಾರೆ.
ನನ್ನಂಥವರು ಬೇಕಾದಷ್ಟು ಜನ ಕಾಂಗ್ರೆಸ್‌ನಲ್ಲಿ ಹುಟ್ಟಿಕೊಳ್ಳುತ್ತಾರೆ. ವಿಜಯೇಂದ್ರನ ವಿರುದ್ಧ ಎಲ್ಲಾ ಆರೋಪಗಳನ್ನ ಬಿಚ್ಚಿ ಹೇಳುತ್ತೇನೆ. ಭ್ರಷ್ಟಾಚಾರದ ಪಿತಾಮಹ ಅಂದ್ರೆ ಏನು ಅಂತಾ ಹೇಳಬೇಕು. ವಿಜಯೇಂದ್ರಗೆ ತಾಕತ್ ಇದ್ರೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಕೊಡಲಿ. ಗಂಡಸಾಗಿದ್ರೆ ಅವನು ಹೇಳಲಿ, ಅವನಿಗೆ ನಾನು ಗೌರವ ಕೊಡುತ್ತೇನೆ. ಅವನನ್ನ ಪಾರ್ಟಿ ಅಧ್ಯಕ್ಷ ಅಂತಾ ಒಪ್ಪಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಯಾವ ಭ್ರಷ್ಟಾಚಾರ, ಏನ್ ತನಿಖೆಯಾಗಿದೆ, ಯಾವಾಗ ಆಗಿದೆ ಎಂಬುದನ್ನ ಹೇಳಬೇಕು. ನಾನು ಇ.ಡಿ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದೆ. ಆಗ ನಿಮ್ಮಪ್ಪ ಇನ್ಕಮ್ ಟ್ಯಾಕ್ಸ್‌ಗೆ ಕೊಟ್ಟಿದ್ರಲ್ಲ ಏನ್ ಅಂತಾ ಗೊತ್ತಾ? ಸುಪ್ರೀಂ ಕೋರ್ಟ್‌ನಲ್ಲಿ ಇ.ಡಿ ಕೇಸ್ ವಜಾ ಆಗಿದ್ದು ಗೊತ್ತಾ? ಇದಕ್ಕೆಲ್ಲ ಉತ್ತರ ಕೊಡುತ್ತೇನೆ ಸಮಯ ಬರಲಿ ಎಂದು ವಿಜಯೇಂದ್ರ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.