
ಹಿಡಕಲ್ ಡ್ಯಾಂ : ಹಳೆ ವೈಷಮ್ಯ, ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಹುಕ್ಕೇರಿ: ಮಾರಕಾಸ್ತ್ರಳಿಂದ ಕೊಚ್ಚಿ ಓರ್ವ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ನಿವಾಸಿ 32 ವರ್ಷದ ಪರಶುರಾಮ ಹಲಕರ್ಣಿ ಎಂಬ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಗ್ರಾಮದ ಆಂಜನೇಯನ ಮಂದಿರ ಹತ್ತಿರ ಮೂವರು ಸೇರಿ ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ. ಮೂವರಲ್ಲಿ 24 ವರ್ಷದ ಮಂಜುನಾಥ ಪುಟ್ಜನೆ ಹಾಗೂ 30 ವರ್ಷದ ಕೆಂಪಣ್ಣ ನೆಸರಗಿ ಪೋಲಿಸರಿಗೆ ಶರಣಾಗಿದ್ದು ಇನ್ನೋಬ್ಬ ಆರೋಪಿ ಪರಾರಿಯಾಗಿದ್ದಾನೆ.

ಹತ್ಯೆಗೊಳಗಾದ ಯುವಕ ಕಿರಾಣಿ ಅಂಗಡಿ ವ್ಯಾಪಾರಿಯಾಗಿದ್ದನು. ಕೊಲೆಗೆ ಹಳೆಯ ವೈಷಮ್ಯ ಕಾರಣ ಎಂದು ತಿಳಿದು ಬಂದಿದೆ. ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
