
ನನ್ನ ಜೊತೆ ತಂದೆಗೂ ಹನಿಟ್ರ್ಯಾಪ್ ಬಲೆ ; ಸಚಿವ ರಾಜಣ್ಣ ಪುತ್ರನ ಸ್ಪೋಟಕ ಹೇಳಿಕೆ

ಬೆಂಗಳೂರು : ನನ್ನ ಜೊತೆ ನನ್ನ ತಂದೆಯವರಿಗೂ ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿತ್ತು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಚಿವ ಕೆ.ಎನ್ ರಾಜಣ್ಣ ಮೇಲೆ ಕಳೆದ ಕೆಲ ದಿನಗಳ ಹಿಂದೆ ಅನೇಕ ಬಾರಿ ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿದೆ ಎಂಬ ಸುದ್ದಿ ನಿಜವಾಗಿದೆ. ಈ ಕುರಿತು ವಿಧಾನಸಭೆ ಕಲಾಪದಲ್ಲಿ ಚರ್ಚೆಯೂ ನಡೆದಿದೆ.
ಈ ಮಧ್ಯೆ ಸಚಿವ ರಾಜಣ್ಣ ಜೊತೆ ಅವರ ಪುತ್ರ ರಾಜೇಂದ್ರ ಅವರಿಗೂ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ. ಈ ಕುರಿತು ಮಾಹಿತಿ ನೀಡಿದ್ದು ನನ್ನ ವಿರುದ್ಧವೂ ಪ್ರಯತ್ನ ನಡೆದಿದೆ. ಈ ಕುರಿತು ಸಿಎಂ ಹಾಗೂ ಗೃಹ ಸಚಿವರ ಗಮನಕ್ಕೂ ತಂದಿದ್ದು, ಹೈಕಮಾಂಡ್ ಜೊತೆಗೆ ಮಾತನಾಡುತ್ತೇವೆ ಎಂದಿದ್ದಾರೆ.
ಇನ್ನು ಹನಿಟ್ಯ್ರಾಪ್ ಮಾಡುವವರು ಕೆ ಎನ್ ರಾಜಣ್ಣ ಅವರನ್ನೇ ಯಾಕಾಗಿ ಟಾರ್ಗೆಟ್ ಮಾಡಿದರು ಎಂಬ ಪ್ರಶ್ನೆಗೆ ‘ ರಾಜಣ್ಣ ನೇರ ನುಡಿಯ ಮನುಷ್ಯ. ಅವರ ಬಗ್ಗೆ ಕೆಲವು ಜನರಿಗೆ ಆಗುತ್ತೆ ಕೆಲವರಿಗೆ ಆಗಲ್ಲ. ಹೀಗಾಗಿ ಟಾರ್ಗೆಟ್ ಮಾಡಿರಬಹುದು’ ಎಂದು ರಾಜೇಂದ್ರ ಹೇಳಿದರು.
ಹನಿಟ್ರ್ಯಾಪ್ ಪ್ರಯತ್ನ ಮಾಡಿರುವ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುತ್ತೇವೆ. ಅಷ್ಟೇ ಅಲ್ಲದೆ, ಸಿಎಂ ಗಮನಕ್ಕೂ ತರುತ್ತೇವೆ. ನಮ್ಮನ್ನು ಮುಗಿಸೋಕೆ ಆಗಲ್ಲ.ಕೆಟ್ಟ ಹೆಸರು ತರಲು ಪ್ರಯತ್ನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.