
ಸವದತ್ತಿಯಲ್ಲಿ ಜೆಸಿಬಿ ಸದ್ದು ; ಕಂಗಾಲಾದ ವ್ಯಾಪಾರಸ್ಥರು

ಸವದತ್ತಿ : ತಾಲೂಕಿನ ಎಪಿಎಂಸಿ ಇಂದ ಮಾರುತಿ ದೇವಸ್ಥಾನದ ವರೆಗಿನ ರಸ್ತೆ ವಿಸ್ತೀರ್ಣ ಹೆಚ್ಚಿಸುವ ಹಿನ್ನಲೆಯಲ್ಲಿ ಅಂಗಡಿ ಮುಗ್ಗಟ್ಟು ಸೇರಿದಂತೆ ಕಟ್ಟಡ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
ಗುರುವಾರ ನಗರದಲ್ಲಿ ಜೆಸಿಬಿ ಸದ್ದು ಮಾಡಿದ್ದವು, ರಸ್ತೆಯ ವಿಸ್ತರಣೆಗೆ ಅಕ್ಕ ಪಕ್ಕ ಇರುವ ಬಹುತೇಕ ಕಟ್ಟಡಗಳು, ಮಳಿಗೆ, ಗೂಡಂಗಡಿಗಳನ್ನು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವ ಕೆಲಸ ಮಾಡಲಾಯಿತು.
ಸವದತ್ತಿ ತಾಲೂಕಾಡಳಿತ, ಪುರಸಭೆ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಹಳೆಯ ವ್ಯಾಪಾರಿಗಳಿಗೆ ತಮ್ಮ ಅಂಗಡಿ ಮುಗ್ಗಟ್ಟು ನೆಲಸಮ ನೋವು ತರಿಸಿತ್ತು. ಆದರೆ ಅಭಿವೃದ್ಧಿ ಕಾರ್ಯಕ್ಕೆ ನಗರದ ಜನ ಕೈಜೋಡಿಸಿದ್ದು ವಿಶೇಷ.