ಬಿಜೆಪಿ ಸೋಶಿಯಲ್ ಮೀಡಿಯಾ ಕಾರ್ಯಕಾರಿ ಸಮೀತಿ ಸದಸ್ಯರಾಗಿ ಅವಿನಾಶ್ ಹಿರೇಮಠ ಆಯ್ಕೆ
ಬೆಳಗಾವಿ : ಅರಭಾವಿ ಮಂಡಲದ ಬಿಜೆಪಿ ಸಾಮಾಜಿಕ ಜಾಲತಾಣದ ಕಾರ್ಯಕಾರಿ ಸಮೀತಿ ಸದಸ್ಯರಾಗಿ ಅವಿನಾಶ್ ಹಿರೇಮಠ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಇನ್ನೂ ಆರು ಜನ ತಂಡವನ್ನು ಆಯ್ಕೆಮಾಡಿ ಮಂಡಲ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
ಮೂಲತಃ ಮೂಡಲಗಿ ತಾಲೂಕಿನ ಯುವಕ ಅವಿನಾಶ್ ಹಿರೇಮಠ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಪರ ಪ್ರಚಾರ ಮಾಡುವುದರಲ್ಲಿ ಪರಿಣಿತರು. ಹಿಂದಿನಿಂದಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡುತ್ತಿದ್ದ ಇವರನ್ನು, ಬಿಜೆಪಿ ಸಾಮಾಜಿಕ ಜಾಲತಾಣದ ಕಾರ್ಯಕಾರಿ ಸಮಿತಿ ಸದಸ್ಯನ್ನಾಗಿ ಆಯ್ಕೆ ಮಾಡಿ ಅರಭಾವಿ ತಾಲೂಕು ಬಿಜೆಪಿ ಅಧ್ಯಕ್ಷರಾದ ಮಹಾದೇವ ಶೆಕ್ಕಿ ಆದೇಶ ಹೊರಡಿಸಿದ್ದಾರೆ.