ತನ್ನದೇ ನಗ್ನ ಪೋಟೋ ಹರಿಬಿಟ್ಟ ಬಿಜೆಪಿ ಮುಖಂಡ
ಪಕ್ಷ ಗೆಲ್ಲಿಸಲು ಹೋದವರು ಚಡ್ಡಿ ಬಿಚ್ಚಿದ್ದು ದುರಂತ..!
ಬೆಳಗಾವಿ : ಗೋವಾ ಚುನಾವಣೆ ಹಿನ್ನಲೆ ಬಿಜೆಪಿ ಪಕ್ಷದ ಪರ ಕೆಲಸ ಮಾಡಲು ತೆರಳಿದ್ದ ಮುಖಂಡ ತನ್ನದೇ ಅರೆಬೆತ್ತಲೆ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಹಡಿಬಿಡುವ ಮೂಲಕ ಅವಾಂತರ ಸೃಷ್ಟಿಸಿದ್ದಾನೆ.
ಹೌದು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ್ ಪೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಜೆಪಿ ಪದಾಧಿಕಾರಿಗಳು ಹಾಗೂ ಪ್ರಮುಖ ಕಾರ್ಯಕರ್ತರಿರುವ ವಾಟ್ಸಾಪ್ ಗ್ರೂಪ್‌ವೊಂದಕ್ಕೆ ತನ್ನದೇ ನಗ್ನ ಫೋಟೋವನ್ನು ಹರಿಬಿಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ.
ಗೋವಾದ ಹೋಟೆಲ್ಲೊಂದರಲ್ಲಿ ತಂಗಿದ್ದ ವೇಳೆ ತೆಗೆದಿದ್ದಾರೆ ಎನ್ನಲಾದ ನಗ್ನ ಫೋಟೋವನ್ನು ಸ್ವತಃ ಶಶಿಕಾಂತ ಪಾಟೀಲ ಅವರೇ ತಮ್ಮ ಮೊಬೈಲ್ ನಿಂದ ಬಿಜೆಪಿ ಕರ್ನಾಟಕ ದಕ್ಷಿಣ ಮಂಡಲ ಎನ್ನುವ ವಾಟ್ಸಪ್ ಗ್ರೂಪ್‌ಗೆ ಬುಧವಾರ ಸಾಯಂಕಾಲ ಹರಿಬಿಟ್ಟಿದ್ದಾರೆ.