Select Page

Advertisement

ಪ್ರಧಾನಿ ಮೋದಿಗೆ ಸಂಸದ ಸಾಗರ್ ಖಂಡ್ರೆ ಖಡಕ್ ಪ್ರಶ್ನೆ

ಪ್ರಧಾನಿ ಮೋದಿಗೆ ಸಂಸದ ಸಾಗರ್ ಖಂಡ್ರೆ ಖಡಕ್ ಪ್ರಶ್ನೆ

ಬೀದರ್ : ಭಾಲ್ಕಿ ಹಾಗೂ ಕಮಲನಗರ ರೈಲ್ವೆ ನಿಲ್ದಾಣವನ್ನು ಅಮೃತ ಭಾರತ್ ಯೋಜನೆಗೆ ಸೇರಿಸಿ ಅಭಿವೃದ್ಧಿಪಡಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.

ಸಂಸತ್ತಿನಲ್ಲಿ ಮಾತನಾಡಿದ ಅವರು, ಬೀದರ್‌-ಬೆಂಗಳೂರು ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ 2 ಬೋಗಿ ಸೇರಿಸಬೇಕು. ದಕ್ಷಿಣ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಹೈದರಾಬಾದ್ ನಿಂದ ಬೀದರ್ ಗೆ ವಿಸ್ತರಿಸಿ, ದೆಹಲಿಗೆ ಉತ್ತಮ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು.

ಬೀದರ್‌ ಹಾಗೂ ಬೆಂಗಳೂರು ನಡುವೆ ವಂದೇ ಭಾರತ ರೈಲು ಆರಂಭಿಸಿ ಪ್ರವಾಸಿಗರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ತಾಂಡೂರು ಸಿಮೆಂಟ್ ಕ್ಲಸ್ಟರ್ ದಿಂದ ಜಹೀರಾಬಾದ್ ಗೆ ಸಂಚರಿಸುವ

ಹೊಸ ರೈಲು ಮಾರ್ಗವನ್ನು ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ ತಾಲ್ಲೂಕು ಮೂಲಕ ಸಾಗುವಂತೆ ಮಾರ್ಗ ಸೂಚಿಸಬೇಕು. ಚಿಂಚೋಳಿಯು ಹಿಂದುಳಿದ ತಾಲ್ಲೂಕಾಗಿದ್ದು, ಈ ಹೊಸ ರೈಲು ಮಾರ್ಗವು ಆ ಭಾಗದ ಜನರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಾಯವಾಗಲಿದೆ ಎಂದು ವಿವರಿಸಿದರು.

ಕಳೆದ ದಶಕದಲ್ಲಿ ರೈಲ್ವೆ ಅಪಘಾತ ಸಂಭವಿಸಿ 2.6 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಎನ್‌ ಸಿ ಆರ್‌ ಬಿ ಅಂಕಿಅಂಶ ಉಲ್ಲೇಖಿಸಿದ ಅವರು, ಈ ಸಮಸ್ಯೆ ಪರಿಹಾರಕ್ಕಾಗಿ ಕೆಎವಿಎಸಿಎಚ್ ತಂತ್ರಜ್ಞಾನ ತ್ವರಿತಗತಿಯಲ್ಲಿ ಜಾರಿಗೆ ತರಬೇಕು ಎಂದು ಹೇಳಿದರು. ಇದನ್ನೂ ಓದಿ

Advertisement

Leave a reply

Your email address will not be published. Required fields are marked *

error: Content is protected !!