ಜೋಕಾಲಿ ಜೀಕು ಬಾ
ನಾಗರ ಪಂಚಮಿ ಬಂದೈತಿ.
ಚೆಲುವ್ಯಾರ ಸಂಭ್ರಮ ಬಲು ಜೋರೈತಿ
ಹರೆಯದ ಹೆಣ್ಣಿನ ಸಿಂಗಾರ ನೋಡಿ
ಆ ಜೋಕಾಲಿ ನಾಚಿ ನಗತೈತಿ…..!
ಬಣ್ಣಬಣ್ಣದ ಬಟ್ಟೆ ತೊಟ್ಟು
ಹಣಿಮ್ಯಾಲೋಂದ ಬೊಟ್ಟಿಟ್ಟು
ಆ ಮಾರುದ್ದ ಜಡಿ..
ಅದಕೊಂದ ಮಲ್ಲಿಗೆ ಮುಡಿ…..!
ಏರಿಳಿತದ ಉಯ್ಯಾಲಿ
ದೇವತೆಗಳೆಲ್ಲ ಹಾಡ್ಯಾರ ಜೋಲಾಲಿ
ತಂಗಾಳೀಲಿ ತೇಲಿ-ತೇಲಿ
ಮುಗಿಲಿಗಿ ಮುತ್ತಿಕ್ಕಿ ನೀ ಬಾ ಇಲ್ಲಿ
ಚಂದೈತಿ ಹೆಂಗಳೆಯರ ಸಡಗರ
ಆಕಾಶ ಇಲ್ಲ ಇನ್ನು ದೂರ
ಎಲೆ ಹೆಣ್ಣೇ ನೀ ಜೋಪಾನ.
ಆಕಾಶಕ್ಕಿಲ್ಲ ಕೇಳು ಸೋಪಾನ…..!
ಜಯಶ್ರೀ ಅವಟಿ
ಅಥಣಿ