ರಾಮದುರ್ಗ : ಅಪರಿಚಿತ ವಾಹನ ಡಿಕ್ಕಿ : ಯುವಕ ಸಾವು
ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕೆ.ಚಂದರಗಿ ಗ್ರಾಮ ಹತ್ತಿರದ ಬಾಗಲಕೋಟ ಬೆಳಗಾವಿ ಹೆದ್ದಾರಿಯಲ್ಲಿ ಹೋಗುವಾಗ ಕೆ.ಚಂದರಗಿ ಗ್ರಾಮದ ಹತ್ತಿರ ಹಿಟ್ ಆಂಡ್ ರನ್ ದ್ವಿಚಕ್ರವಾಹನ ಸವಾರ ಧನರಾಜನ ಸ್ಥಳದಲ್ಲಿ ಸಾವನ್ನಪಿದ್ದಾನೆ.
ಹುಬ್ಬಳ್ಳಿಯ ವ್ಯಕ್ತಿ ಲೋಕಾಪೂರದಿಂದ ತನ್ನ ಮೋಟಾರ ಸೈಕಲ್ ಮೇಲೆ ಬೆಳಗಾವಿ ಬಾಗಲಕೋಟ ಹೆದ್ದಾರಿಯಿಂದ ಹಿಡಿದು ಬೆಳಗಾವಿಗೆ ಹೋಗುವಾಗ ಕೆ.ಚಂದರಗಿ ಗ್ರಾಮದ ಹದ್ದಿನಲ್ಲಿ . ಇವನ ಎದುರಿನಿಂದ ಬೆಳಗಾವಿ ಲೋಕಾಪೂರ ಕಡೆಗೆ ಹೋಗುತ್ತಿದ್ದ ಯಾವುದೋ ಅಪರಿಚಿತ ವಾಹನ ಅತೀವೇಗದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಅಪಘಾತ ಪಡಿಸಿದ್ದಾನೆ.
ಘಟನೆ ಕುರಿತಂತೆ ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಅಧಿಕಾರಿಯಾದ (PSI) ಸಿದ್ರಾಮಪ್ಪ ಉನ್ನದ ಸ್ಥಳಕ್ಕೆ ಧಾವಿಸಿ ಪರಶೀಲನೆ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.