ವಿಜಯಪುರ : ಸಚಿವ ಎಂ.ಬಿ ಪಾಟೀಲ ಮನೆ ಮುಂದೆ ಪ್ರತಿಭಟನೆ ಮಾಡುವ ವೇಳೆ ಸ್ವಾಮೀಜಿ ಓರ್ವ ಪಿಎಸ್ಐ ಕಪಾಳಕ್ಕೆ ಹೊಡೆದ ಘಟನೆ ನಡೆದಿದೆ.
ವಿಜಯಪುರದಲ್ಲಿ ಖಾಸಗಿ ಮೆಡಿಕಲ್ ಕಾಲೇಜು ವಿರೋಧಿಸಿ ಸಚಿವ ಎಂ.ಬಿ ಪಾಟೀಲ ಮನೆ ಎದುರು ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನೆ ಮಾಡುತ್ತಿದ್ದ ಬಸವನಬಾಗೇವಾಡಿ ತಾಲೂಕಿನ ಪಿ ಬಿ ಹುಣಶ್ಯಾಳ ಮಠದ
ಸಂಗನಬಸವೇಶ್ವರ ಸ್ವಾಮೀಜಿ ಇದ್ದರು.
ಈ ಸಂದರ್ಭದಲ್ಲಿ ಸ್ವಾಮೀಜಿ ಮೊಬೈಲ್ ಅನ್ನು ಪಿಎಸ್ಐ ಸೀತಾರಾಮ ಲಮಾಣಿ ಕಸಿದುಕೊಂಡರು. ಇದರಿಂದ ಸಿಟ್ಟಿಗೆದ್ದ ಸಂಗನಬಸವೇಶ್ವರ ಸ್ವಾಮೀಜಿ ಪಿಎಸ್ಐಗೆ ಕಪಾಳಮೋಕ್ಷ ಮಾಡಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ ಸ್ವಾಮೀಜಿ ಸೇರಿದಂತೆ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆ ವೇಳೆ ಪಿಎಸ್ಐ ಕಪಾಳಕ್ಕೆ ಹೊಡೆದ ಸ್ವಾಮೀಜಿ – Video


