Select Page

ದೂದ್ ಸಾಗರ್ ಗೆ ತೆರಳುವರು ಎಚ್ಚರ : ಪ್ರಯಾಣ ಉಚಿತ, ಗೋವಾ ಪೊಲೀಸರಿಂದ ಏಟು ಖಚಿತ

ದೂದ್ ಸಾಗರ್ ಗೆ ತೆರಳುವರು ಎಚ್ಚರ : ಪ್ರಯಾಣ ಉಚಿತ, ಗೋವಾ ಪೊಲೀಸರಿಂದ ಏಟು ಖಚಿತ

ಬೆಳಗಾವಿ : ಪಶ್ಚಿಮ ಘಟ್ಟಗಳ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನೀರಿನ ಜಲಪಾತಗಳಿಗೆ ಜೀವಕಳೆ ಬಂದಿದ್ದು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ದೂದ್ ಸಾಗರ ಜಲಪಾತ ನೋಡಲು ಪ್ರವಾಸಿಗರ ದಂಡು ಆಗಮಿಸುತ್ತಿದೆ.

ಧಾರಾಕಾರ ಮಳೆ ಹಿನ್ನಲೆಯಲ್ಲಿ ಗುಡ್ಡ ಕುಸಿಯುವ ಭೀತಿ ಹಿನ್ನಲೆಯಲ್ಲಿ ಗೋವಾ ಗಡಿ ಭಾಗದ ಭಗವಾನ್ ಮಹಾವೀರ ರಾಷ್ಟ್ರೀಯ ಉದ್ಯಾನ ಬಳಿ ಇರುವ ದೂದಸಾಗರ ನೋಡಲು ಯುವಕರು ರೈಲ್ವೆ ಟ್ರ್ಯಾಕ್ ಮೂಲಕ ನಡೆದುಕೊಂಡು ಸಾಗುತ್ತಾರೆ. ಆದರೆ ಟ್ರೆಕ್ಕಿಂಗ್ ಮೂಲಕ ಪ್ರವೇಶಕ್ಕೆ ಗೋವಾ ಸರ್ಕಾರ ನಿಷೇಧ ಹೇರಿದ್ದರು ಯುವಕರು ಆಗಮಿಸುತ್ತಿದ್ದಾರೆ.

ನಿಷೇಧದ ನಡುವೆ ಸಾವಿರಾರು ಸಂಖ್ಯೆಯಲ್ಲಿ ಯುವಕರು ದೂದ್ ಸಾಗರ್ ನೋಡಲು ತೆರಳಿದ್ದು ಸಧ್ಯ ಗೋವಾ ಪೊಲೀಸರು ಬಸ್ಕಿ ಶಿಕ್ಷೆ ನೀಡಿದ್ದಾರೆ. ನಿಷೇಧಿತ ಪ್ರದೇಶದಲ್ಲಿ ತೆರಳದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.

ಆದರೆ ಗೋವಾ ಪೊಲೀಸರ ನಡೆಯನ್ನು ಖಂಡಿಸಿದ ಸಾವಿರಾರು ಪ್ರವಾಸಿಗರು ರೈಲು ಹಳಿ ಮೇಲೆ ನಿಂತು ಗೋವಾ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದರು. ಸಧ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Advertisement

Leave a reply

Your email address will not be published. Required fields are marked *

error: Content is protected !!