ಮುಖ ಮುಚ್ಚಿಕೊಂಡು ಜೈಲು ಪಾಲಾದ ಕಿತ್ತೂರು ತಹಶಿಲ್ದಾರ
ಬೆಳಗಾವಿ : ಭ್ರಷ್ಟಾಚಾರ ಆರೋಪದಲ್ಲಿ ಲೋಕಾಯುತ್ತ ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ಕಿತ್ತೂರು ತಹಶಿಲ್ದಾರ ಸೋಮಲಿಂಗಪ್ಪ ಹಾಲಗಿ ಹಿಂಡಲಗಾ ಜೈಲು ಪಾಲಾಗಿದ್ದಾರೆ.
ನಿನ್ನೆ ನಡೆದ ಲೋಕಾಯುಕ್ತ ದಾಳಿಯಲ್ಲಿ ಲಂಚ ಪಡೆಯುವ ಸಂದರ್ಭದಲ್ಲೇ ಸಿಕ್ಕಿಬಿದ್ದಿದ್ದರು. ಶನಿವಾರ ಇದೇ ಆರೋಪದ ಮೇಲೆ ಅವರನ್ನು ನಗರದ ಹಿಂಡಲಗಾ ಕಾರಾಗೃಹಕ್ಕೆ ಸೇರಿಸಲಾಗಿದೆ.
ಪಹಣಿ ಪತ್ರದಲ್ಲಿ ಖಾತಾ ಬದಲಾವಣೆ ಮಾಡಲು ಬೇಡಿಕೆ ಇಟ್ಟಿದ್ದ 5 ಲಕ್ಷ ರೂ ಹಾಗೂ 20 ಲಕ್ಷ ರೂ ಮೌಲ್ಯದ ಖಾಲಿ ಚಕ್ ಪಡೆಯುವ ಸಂದರ್ಭದಲ್ಲಿ ಕಿತ್ತೂರು ತಹಶಿಲ್ದಾರ ಸೋಮಲಿಂಗಪ್ಪ ಹಾಲಗಿ ಮತ್ತು ಭೂ ಸುಧಾರಣಾ ವಿಷಯಗಳ ನಿರ್ವಾಹಕ ಪ್ರಸನ್ನ ಜಿ ಎಂಬುವವರು ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದರು.
10 ಎಕರೆ ಜಮೀನಿನ ಪಹಣಿ ಪತ್ರದಲ್ಲಿ ಖಾತಾ ಬದಲಾವಣೆ ಮಾಡಲು ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ನವೆಂಬರ್ 24 ರಂದು ಬೆಳಗಾವಿ ಲೋಕಾಯುಕ್ತ ಠಾಣೆಯಲ್ಲಿ ಪ್ತಕರಣ ದಾಖಲಾಗಿತ್ತು. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಸೂಚನೆಯಂತೆ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಯಶೋಧಾ ವಂಟಗೋಡಿ ಅವರ ಮಾರ್ಗದಲ್ಲಿ ನಡೆದ ದಾಳಿಯಲ್ಲಿ ಆರೋಪಿತರು 5 ಲಕ್ಷ ರೂ ಹಾಗೂ 20 ಲಕ್ಷ ರೂ ಮೌಲ್ಯದ ಖಾಲಿ ಚಕ್ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.