ಬೆಳಗಾವಿ : ಶನಿವಾರದ ನ್ಯೂಸ್ ರೌಂಡ್ – ಜಿಲ್ಲೆಯಾದ್ಯಂತ ಏನೆಲ್ಲ ಘಟನೆ ನಡೆಯಿತು..?
01) ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತ್ರತ್ವದಲ್ಲಿ ಇಂದು ನಗರದಲ್ಲಿ ಸಭೆ ನಡೆಯಿತು. ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ನಾಯಕರು ಹಾಜರಿದ್ದರು. ಜೊತೆಗೆ ನಾಯಕರ ಮಧ್ಯದ ಭಿನ್ನಾಭಿಪ್ರಾಯ ಕುರಿತು ಚರ್ಚೆ ನಡೆಯಿತು ಎನ್ನಲಾಗಿದೆ. ಸಭೆಗೆ ರಮೇಶ್ ಜಾರಕಿಹೊಳಿ ಗೈರು.
02) ಭೀಕರ ಅಪಘಾತ ದೊಡ್ಡವಾಡ ಬಾಲಕಿ ಸಾವು : ಧಾರವಾಡ ಜಿಲ್ಲೆಯ ಬಾಡಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದ ಬೀಕರ ರಸ್ತೆ ಅಪಘಾತದಲ್ಲಿ 7 ಜನ ಮೃತಪಟ್ಟವರಲ್ಲಿ ಬೆಳಗಾವಿ ತಾಲೂಕಿನ ದೊಡ್ಡವಾಡ ಗ್ರಾಮದ ಬಾಲಕಿಯೂ ಸಹ ಮೃತಪಟ್ಟಿದ್ದಾಳೆ.
ಧಾರವಾಡದ ಬಾಡ ಗ್ರಾಮದಲ್ಲಿ ಏಳು ಜನ ಅಪಘಾತದಲ್ಲಿ ಮೃತಪಟ್ಟಿದ್ದು ಈ ಪೈಕಿ ಪೈಕಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಬಾಲಕಿಯೂ ಒಬ್ಬಳಾಗಿದ್ದಾಳೆ.
03 ) ರಾಯಣ್ಣ ಮೂರ್ತಿಗೆ ಕಲ್ಲು ಹೊಡೆದ ಕಿರಾತಕರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಲ್ಲು ಹೊಡೆದ ಘಟನೆ ಬೆಳಗಾವಿ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಸ್ಥಳಕ್ಕಯ ಪೊಲೀಸರು ಭೇಟಿ ನೀಡಿದ್ದಾರೆ. ಘಟನೆಯಲ್ಲಿ ರಾಯಣ್ಣ ಮೂರ್ತಿ ಕಾಲಿಗೆ ಸ್ವಲ್ಪ ಹಾನಿಯಾಗಿದೆ.
04 ) ಪ್ರವಾಹ ನಿರ್ವಹಣೆ: ಜಿಲ್ಲಾಧಿಕಾರಿ ವಿಡಿಯೋ ಸಂವಾದ : ಪ್ರವಾಹ ಸಂದರ್ಭದಲ್ಲಿ ಜನ-ಜಾನುವಾರುಗಳ ತಕ್ಷಣ ರಕ್ಷಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಇದಲ್ಲದೇ ಮಾನವ ಪ್ರಾಣಹಾನಿ ಅಥವಾ ಜಾನುವಾರ ಜೀವಹಾನಿಯಾದರೆ 24 ಗಂಟೆಗಳಲ್ಲಿ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
05 )ಗೋಕಾಕ್ ತಾಲೂಕಿನ ಉರಬನಟ್ಟ ಗ್ರಾಮದಲ್ಲಿ ನೂತನ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಅಳವಡಿಸುವ ಸಂದರ್ಭದಲ್ಲಿ ರಮೇಶ್ ಹೊಳ್ಳಪ್ಪಗೋಳ(32) ಕೆಇಬಿ ಸಹಾಯಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಇನ್ನೊರ್ವ ಲೈನ್‍ಮ್ಯಾನ್ ದರೀಗೌಡ ವಡೇರಗೆ ಗಾಯವಾಗಿದ್ದು. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ಅಂಕಲಗಿ ಪಿಎಸ್‍ಐ ಪ್ರಕಾಶ್ ರಾಥೋಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಕಲಗಿ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
* ಅಥಣಿಯಯಲ್ಲಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವದ ಭವ್ಯ ಕಾರ್ಯಕ್ರಮ : ಖ್ಯಾತ ಗಾಯಕ ವಿಜಯ್ ಪ್ರಕಾಶ್ ಭಾಗಿ.
* ಶಿಕ್ಷಕರ ಹುದ್ದೆ ನೇಮಕಾತಿ ಪರೀಕ್ಷೆ ಜಿಲ್ಲೆಯ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸ್ ಭದ್ರತೆಯಲ್ಲಿ ನಡೆದ ಪರೀಕ್ಷೆ.
*ಸಿಎಂ ಬದಲಾವಣೆ ಇಲ್ಲ ಎಂದ ಪ್ರಹ್ಲಾದ್ ಜೋಶಿ.