Select Page

Advertisement

ಕಾಮುಕ ಅಣ್ಣನ ಹಾದಿಯಲ್ಲೇ ಸಾಗಿದ ತಮ್ಮ ; ಪಜ್ಜು ಹಿಂದೆ ಸುಜ್ಜು

ಕಾಮುಕ ಅಣ್ಣನ ಹಾದಿಯಲ್ಲೇ ಸಾಗಿದ ತಮ್ಮ ; ಪಜ್ಜು ಹಿಂದೆ ಸುಜ್ಜು

ಬೆಂಗಳೂರು : ಜೆಡಿಎಸ್ ಕಾರ್ಯಕರ್ತನ ಮೇಲೆ ಸಲಿಂಗಕಾಮದ ಆರೋಪದ ಮೇಲೆ ಅರೆಸ್ಟ್ ಆಗಿದ್ದ ಪರಿಷತ್ ಸದಸ್ಯ ಸೂರಜ್ ರೇವಣ್ಣ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದ್ದು ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.

ಹಾಸನದಲ್ಲಿ ದಾಖಲಾಗಿದ್ದ ಸೂರಜ್ ರೇವಣ್ಣ ವಿರುದ್ಧ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಭಾನುವಾರ ಪೊಲೀಸರು ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಸಲಿಂಗ ಕಾಮದ ಆರೋಪಿ ಸೂರಜ್ ನನ್ನು ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.

ಇನ್ನೂ ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಅಣ್ಣನ ಹಾದಿಯಲ್ಲೇ ಸಾಗಿರುವ ತಮ್ಮ ಮಾಡಬಾರದ ಕೆಲಸ ಮಾಡುವ ಮೂಲಕ ಅದೇ ಜೈಲಿಗೆ ತೆರಳಿದ್ದಾನೆ.

ಸೂರಜ್ ರೇವಣ್ಣ ಪ್ರಕರಣ ಸಿಐಡಿಗೆ

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಇವರು. ರೇವಣ್ಣ ಕುಟುಂಬದ ಮತ್ತೊಂದು ಪ್ರಕರಣ ಸಧ್ಯ ರಾಜ್ಯದಲ್ಲಿ ಕುತೂಹಲ ಮೂಡಿಸಿದೆ. ಸಲಿಂಗಕಾಮದ ಆರೋಪದ ಮೇಲೆ ಶನಿವಾರ ಸೂರಜ್ ರೇವಣ್ಣ ಅವರನ್ನು ಹಾಸನ ಪೊಲೀಸರು ವಿಚಾರಣೆಗೆ ಬಂದಾಗ ವಶಕ್ಕೆ ಪಡೆದುಕೊಂಡಿದ್ದಾರೆ.

ಸೂರಜ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶ ಮಾಡಲಾಗಿದ್ದು, ಹಾಸನ ಜಿಲ್ಲಾ ಎಸ್‌ಪಿ ಅವರಿಗೆ ಎಡಿಜಿಪಿ ಆರ್‌. ಹಿತೇಂದ್ರ ಆದೇಶಿಸಿದ್ದಾರೆ. ಆದೇಶದಲ್ಲಿ ಖುದ್ದು ಸಿಐಡಿಗೆ ತೆರಳಿ ಕೇಸ್‌ ಫೈಲ್‌ ಮಾಡಲು ಸೂಚಿಸಿದ್ದಾರೆ. ಅಲ್ಲದೆ ತನಿಖೆಗೆ ಎಲ್ಲ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಿಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!