
ಸಲಿಂಗ ಕಾಮದ ಆರೋಪ ; MLC ಸೂರಜ್ ರೇವಣ್ಣ ಅರೆಸ್ಟ್

ಬೆಂಗಳೂರು : ಜೆಡಿಎಸ್ ಕಾರ್ಯರ್ತನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಅವರ ಮೊಮ್ಮಗ ಪರಿಷತ್ ಸದಸ್ಯ ಸೂರಜ್ ರೇವಣ್ಣನನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ಜೆಡಿಎಸ್ ಕಾರ್ಯರ್ತನೋರ್ವ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದ. ಈ ಪ್ರಕರಣ ಆಧರಿಸಿ ಪೊಲೀಸರು ಹಾಸನ ಸೆನ್ ಠಾಣೆಯ ಪೊಲೀಸರು ಪರಿಷತ್ ಸದಸ್ಯ ಸೂರಜ್ ರೇವಣ್ಣನನ್ನು ಬಂಧಿಸಿದ್ದಾರೆ.
ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೆವಣ್ಣ ಜೈಲು ಸೇರಿದ್ದಾರೆ. ಇನ್ನೂ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಶಾಸಕ ಹೆಚ್.ಡಿ ರೇವಣ್ಣ ಜೈಲು ಪಾಲಾಗಿದ್ದರು. ಭವಾನಿ ರೇವಣ್ಣ ಅಪಹರಣ ಪ್ರಕರಣದಲ್ಲಿ ಬೇಲ್ ಮೇಲೆ ಹೊರಗಿದ್ದಾರೆ. ಈಗ ಇದೇ ಕುಟುಂಬದ ಸೂರಜ್ ರೇವಣ್ಣ ಬಂಧನ ಆಗಿರುವುದು ವಿಪರ್ಯಾಸ.
ಸಧ್ಯ ಸೂರಜ್ ರೇವಣ್ಣ ಮೇಲೆ ಕೇಳಬಂದ ಆರೋಪ ತಮ್ಮದೇ ಪಕ್ಷದ ಯುವಕನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿರುವುದು. ( ಇದಕ್ಕೆ ಸಲಿಂಗ ಕಾಮ ಎನ್ನುತ್ತಾರೆ ) ಪುರುಷ ಹಾಗೂ ಪುರುಷರ ನಡುವೆ ನಡೆಯುವ ಲೈಂಗಿಕ ಕ್ರಿಯೆ. ಇದು ಪ್ರಕೃತಿಗೆ ವಿರುದ್ಧವಾದದ್ದು ಎಂಬ ವಾದ ಇದೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಲಿಂಗ ಕಾಮಕ್ಕೆ ಕಾನೂನಿನಲ್ಲೇ ಅವಕಾಶ ಕಲ್ಪಿಸಲಾಗಿದೆ.