ಬೆಳಗಾವಿ : ರೈತರ ಸಿಟ್ಟು ವಿಕೋಪಕ್ಕೆ ತಲುಪಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರ ವಿರುದ್ಧ ಅನ್ನದಾತರು ಸಿಡಿದೆದ್ದ ಪರಿಣಾಮ ಇಂದು ರಸ್ತೆ ತಡೆ ನಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ‌‌.

ರಾಜ್ಯಾದ್ಯಂತ ಹೋರಾಟದ ಕಿಚ್ಚು ಜೋರಾಗಿದ್ದು ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತರು ತಯಾರಿ ನಡೆಸಿದ್ದಾರೆ. ಜೊತೆಗೆ ಅಥಣಿ ಗೋಕಾಕ್ ರಸ್ತೆಯ ದರೂರ ಸೇತುವೆ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.