ಮಹಿಳೆ ಜೊತೆ ಲಾಡ್ಜ್ ನಲ್ಲಿ ಪೊಲೀಸ್ ಅಧಿಕಾರಿ ರಾಸಲೀಲೆ ; ಹಿಂಬಡ್ತಿ ಶಿಕ್ಷೆ ಕೊಟ್ಟ ಇಲಾಖೆ
ಲಕ್ನೋ : ಮಹಿಳಾ ಪೊಲೀಸ್ ಪೇದೆ ಜೊತೆಯಲ್ಲಿ ಲಾಡ್ಜ್ ಒಂದರಲ್ಲಿ ರಾಸಲೀಲೆ ಇಟ್ಟುಕೊಂಡ ಕಾರಣಕ್ಕೆ ಡಿಎಸ್ಪಿ ಓರ್ವನನ್ನು ಕೆಳದರ್ಜೆಯ ಹುದ್ದೆಗೆ ಹಿಂಬಡ್ತಿ ಕೊಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶ ರಾಜ್ಯದ ಉನ್ನಾವೋದ ಬಿಘಪುರ್ ಠಾಣೆಯಲ್ಲಿ ಸರ್ಕಲ್ ಆಫಿಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಂಕರ್ ಕನೌಜಿಯಾ ಎಂಬುವವರು ಡಿಎಸ್ಪಿ ಆಗೆ ಬಡ್ತಿ ಪಡೆದಿದ್ದರು. ಆದರೆ ಕೆಲ ದಿನಗಳ ಹಿಂದೆ ಮಾಡಿಕೊಂಡ ಎಡವಟ್ಟಿನಿಂದ ಈಗ ಸುದ್ದಿಯಾಗಿದ್ದಾರೆ.
ಡಿಎಸ್ಪಿ ಶಂಕರ್ ಕನೌಜಿಯಾ ಎಂಬುವವರು ಕಳೆದ ಕೆಲ ದಿನಗಳ ಹಿಂದೆ ಕುಟುಂಬದ ಕಾರಣ ನೀಡಿ ಒಂದು ವಾರ ರಜೆ ಪಡೆದುಕೊಂಡಿದ್ದರು. ನಂತರ ಮನೆಯಲ್ಲಿ ಯಾರಿಗೂ ತಿಳಿಸದೆ ಮಹಿಳಾ ಪೊಲೀಸ್ ಪೇದೆ ಒಬ್ಬರ ಜೊತೆಗೂಡಿ ಕಾನ್ಪುರ ಹೊಟೇಲ್ ಸೇರಿದ್ದಾರೆ.
ಡಿಎಸ್ಪಿ ಗೆ ಅವರ ಪತ್ನಿ ಕರೆ ಮಾಡಿದ್ದಾಗ ಈ ವ್ಯಕ್ತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಗಾಬರಿಯಾದ ಕುಟುಂಬ ಉನ್ನಾವೊ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತುರ್ತು ತನಿಖೆಗೆ ಇಳಿದಿದ್ದಾರೆ.
ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ಡಿಎಸ್ಪಿ ಅವರ ಫೋನ್ ಸಂಪರ್ಕಿಸಿ ಅವರಿರುವ ಸ್ಥಳ ಪತ್ತೆ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಜೊತೆ ಆ ಮಹಿಳಾ ಪೇದೆ ಅಶ್ಲೀಲ ಭಂಗಿಯಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಅಷ್ಟರಲ್ಲೇ ಈ ಪ್ರಕರಣ ಬೀದಿ ಪಾಲಾಗಿದೆ.