ಬೆಂಗಳೂರು : ಗ್ರಾಮ ಪಂಚಾಯತಿ ಸದಸ್ಯನ ಮನೆ ಮೇಲೆ‌‌ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಸುಮಾರು 25 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ತಾವರೆಕೆರೆ ಹೋಬಳಿ, ಚನ್ನೇನಹಳ್ಳಿ  ಗ್ರಾಮ ಪಂಚಾಯತಿ ಸದಸ್ಯ, ಹೆಚ್, ಎಸ್ ಸುರೇಶ್ ಎಂಬುವವರ ಬಳಿ 25 ಕೋಟಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತರು ಪತ್ತೆ ಮಾಡಿದ್ದಾರೆ.

ಪಂಚಾಯತಿ ಸದಸ್ಯ ಸುರೇಶ್ ಅವರ ಹೆಸರಿನಲ್ಲಿ 16 ನಿವೇಶನ,1 ವಾಸದ ಮನೆ,  7.6 ಎಕರೆ ಕೃಷಿ ಜಮೀನು, 21.27 ಕೋಟಿ ಸ್ಥಿರಾಸ್ತಿ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಕೂಡಾ ಪತ್ತೆಯಾಗಿದೆ.