Video : ಅಥಣಿ ಶಾಲಾ ಬಸ್ ಅಪಘಾತ – ಘಟನೆಗೆ ಹೆದರಿ ಕಣ್ಣೀರು ಹಾಕಿದ ವಿದ್ಯಾರ್ಥಿನಿಯರು
ಅಥಣಿ : ಪಟ್ಟಣದ ಖಾಸಗಿ ಶಾಲಾ ಮಕ್ಕಳಿದ್ದ ಬಸ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರೂ ಚಾಲಕರು ಮೃತಪಟ್ಟ ಘಟನೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಶಾಲಾ ಮಕ್ಕಳಿದ್ದ ಬಸ್ ಹಾಗೂ ಕಂಟೇನರ್ ನಡುವೆ ಶನಿವಾರ ಬೆಳಗಿನ ಜಾವ ಅಪಘಾತ ಸಂಭವಿಸಿದ್ದು, 20 ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ. ಪಟ್ಟಣದ ಹೊರವಲಯಲ್ಲಿ ಈ ಘಟನೆ ಭವಿಸಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿದ್ದು ಗಾಯಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಮಕ್ಕಳು ಆತಂಕಗೊಂಡಿದ್ದು ಪೋಷಕರು ಭಯಪಡಬೇಕಾದ ಅವಶ್ಯಕತೆ ಇಲ್ಲ.