Select Page

ಮೂಡಲಗಿ : ಸುಣಧೋಳಿ ಜಡಿಸಿದ್ಧೇಶ್ವರ ಮಠ ಜಲಾವೃತ

ಮೂಡಲಗಿ : ಸುಣಧೋಳಿ ಜಡಿಸಿದ್ಧೇಶ್ವರ ಮಠ ಜಲಾವೃತ

ಮೂಡಲಗಿ : ಘಟಪ್ರಭ ನದಿಯ ದಡದಲ್ಲಿನ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಪವಾಡ ಪುರುಷ ಶ್ರೀ ಜಡಿಸಿದ್ಧೇಶ್ವರ ಮಠ ಆವರಣ ಶನಿವಾರದಂದು ಜಲಾವೃತವಾಗಿದೆ.

ಹಿಡಕಲ್ ಜಲಾನಯನ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಹುಣಶ್ಯಾಳ ಪಿವೈ ಗ್ರಾಮದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಕಾಳಜಿ ಕೇಂದ್ರವನ್ನು ಹುಣಶ್ಯಾಳ ಪಿವೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಲಾಗಿದೆ.

ಹುಣಶ್ಯಾಳ ಪಿವೈ ಗ್ರಾಮದ ಹಳೇ ಊರಿಗೆ ಪ್ರವಾಹ ಆವರಿಸಿದ್ದರಿಂದ ಅಲ್ಲಿರುವ ೬೦ ಕುಟುಂಬಗಳ ಪೈಕಿ ೩೦ ಕುಟುಂಬಗಳಿಗೆ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ೨೫ ಕುಟುಂಬಗಳಿಗೆ ಇಲ್ಲಿನ ಶಾಲೆಯಲ್ಲಿ ಊಟ, ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಮೂಡಲಗಿ ತಾಲ್ಲೂಕಾಡಳಿತವು ಕಾಳಜಿ ಕೇಂದ್ರವನ್ನು ತೆರೆದಿದೆ. ಜನ ಹಾಗೂ ಜಾನುವಾರಗಳಿಗೆ ಅಗತ್ಯವಿರುವ ವ್ಯವಸ್ಥೆ ಮಾಡಲಾಗುತ್ತಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತ್ರಸ್ತ ಕುಟುಂಬಗಳ ಬಗ್ಗೆ ಕಾಳಜಿ ಹೊಂದಿದ್ದು, ಕುಟುಂಬದ ಸದಸ್ಯರಂತೆ ನೋಡಿಕೊಳ್ಳವ ಮನೋಭಾವನೆಯನ್ನು ಹೊಂದಿದ್ದಾರೆ ಎಂದು ಹುಣಶ್ಯಾಳ ಪಿವೈ ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ಭಾಸ್ಕರ್ ರಾವ್, ತಹಶೀಲ್ದಾರ ಮಹಾದೇವ ಸನಮುರಿ, ಬಿಇಒ ಅಜೀತ ಮನ್ನಿಕೇರಿ, ಮುಖಂಡ ಗೋಪಾಲ ಬಿಳ್ಳೂರ, ಜಂಬು ಚಿಕ್ಕೋಡಿ, ಹಣಮಂತ ಬಿಳ್ಳೂರ, ಗ್ರಾ.ಪಂ.ಉಪಾಧ್ಯಕ್ಷೆ ಕಾಳವ್ವ ಗೌಡನ್ನವರ, ಸದಸ್ಯರಾದ ಪ್ರಕಾಶ ಪಾಟೀಲ, ಪ್ರಕಾಶ

ಯಡವಿನ್ನವರ, ಬಸು ಬಿಳ್ಳೂರ, ವಿಠ್ಠಲ ಚೌಗಲಾ, ಮಾರುತಿ ಮೇತ್ರಿ, ಮಂಜು ಉತ್ತೂರ, ಸಿದ್ದಪ್ಪ ಡೊಂಬರ, ಪಿಡಿಓ ಉದಯ ಬೆಳ್ಳುಂಡಗಿ, ಗ್ರಾಮ ಆಡಳಿತಾಧಿಕಾರಿ ಸಂಜು ಅಗ್ನೆಪ್ಪಗೋಳ, ಶಾಲೆಯ ಪ್ರಧಾನ ಶಿಕ್ಷಕ ಭಡಕಲ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!