ಬೇಂದ್ರೆ ನನ್ನನ್ನು ಸಲಹುತ್ತಿದ್ದಾರೆ : ಅನಂತ ದೇಶಪಾಂಡೆ
ಬೆಳಗಾವಿ : ಇಂದಿನ ಯುವ ಪೀಳಿಗೆ ಬೇಂದ್ರೆಯವರನ್ನು ಮರೆಯುತ್ತಿದೆ. ಬೇಂದ್ರೆ ದರ್ಶನ ಕಾರ್ಯಕ್ರಮದೊಂದಿಗೆ ಕವಿ ಬೇಂದ್ರೆಯವರು ಹೀಗಿದ್ದರು ಎಂದು ತೋರಿಸುತ್ತ ಹೋಗುವುದೇ ನನ್ನ ಮುಖ್ಯ ಉದ್ದೇಶ ಎಂದು ಕಿರುತೆರೆ ಕಲಾವಿದ, ಬೇಂದ್ರೆ ಪಾತ್ರಧಾರಿ ಅನಂತ ದೇಶಪಾಂಡೆ ಹೇಳಿದರು.
ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯರು ರಂಗಕರ್ಮಿ ಡಾ. ಅರವಿಂದ ಕುಲಕರ್ಣಿಯವರ 69 ನೇ ಜನ್ಮದಿನ ಸಂರ್ಭಮದಲ್ಲಿ ‘ಬೇಂದ್ರೆ ದರ್ಶನ ಮತ್ತು ಬೇಂದ್ರೆ ಭಾವಗೀತೆ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು. ಬೇಂದ್ರೆ ಕಾರ್ಯಕ್ರಮ ನನ್ನ ಜೀವನೋಪಾಯ. ಅವರ ಅದ್ಬುತ ಸಾಹಿತ್ಯ ಸೇವಾ ಕಾರ್ಯವನ್ನು ಯುವ ಪೀಳಿಗೆಗೆ ಮುಟ್ಟಿಸುವುದೇ ನನ್ನ ಕಾಯಕ. ಬೇಂದ್ರೆಯವರೇ ನನ್ನನ್ನು ಸಲಹುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನ ವಹಿಸಿದ್ದ ಹಿರಿಯ ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರು ಬೇಂದ್ರೆಯವರು ಬೇಂದ್ರೆಯವರ ಹಾಗೆಯೇ ಇದ್ದರು. ಅವರಿಗೆ ಬೇರೆ ಹೋಲಿಕೆಯನ್ನು ಕೊಡುವುದು ಸಾಧ್ಯವೇ ಇಲ್ಲ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಎಮ್. ಎಸ್. ಇಂಚಲ, ರಂಗಕರ್ಮಿ ಡಾ. ಅರವಿಂದ ಕುಲಕರ್ಣಿಯವರಿಗೀಗ ಎಪ್ಪತ್ತಲ್ಲ , ಇಪ್ಪತ್ತು ಅಷ್ಟೊಂದು ಕ್ರಿಯಾಶೀಲರಾಗಿದ್ದಾರೆ. ಅವರು ಶತಾಯುಷಿಗಳಾಗಲಿ ಎಂದು ಹಾರೈಸಿದರು.
ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ.ಎಸ್. ಸೋನಾರ, ಶ್ರೀಮತಿ ಪದ್ಮಾ ಕುಲಕರ್ಣಿ ನಿರೂಪಿಸಿದರು. ಅರವಿಂದ ಹುನಗುಂದ ಪರಿಚಯಿಸಿದರು. ಕೆ. ತಾನಾಜಿ ವಂದಿಸಿದರು.